ಕರ್ನಾಟಕ

karnataka

ETV Bharat / bharat

ಟ್ರಾಫಿಕ್ ಪೊಲೀಸ್‌ ಸಿಬ್ಬಂದಿಯನ್ನು ಕಾರ್ ಬಾನೆಟ್​ ಮೇಲೆ 20 ಕಿ.ಮೀ ಎಳೆದೊಯ್ದ ಚಾಲಕ!- ವಿಡಿಯೋ - ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತು

ಟ್ರಾಫಿಕ್ ಪೊಲೀಸರೊಬ್ಬರು ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಿಸಲಾಗದೇ ಕೊನೆಗೆ ಬಾನೆಟ್​ ಮೇಲೆ ಜಿಗಿದು ಹರಸಾಹಸಪಟ್ಟು ತಮ್ಮ ಪ್ರಾಣ ಉಳಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಎಂಬಲ್ಲಿ ನಡೆದಿದೆ.

ಕಾರ್ ಬಾನೆಟ್​ ಮೇಲೆ ಟ್ರಾಫಿಕ್ ಪೊಲೀಸನ್ನು ಎಳೆದೊಯ್ದ ಚಾಲಕ
ಕಾರ್ ಬಾನೆಟ್​ ಮೇಲೆ ಟ್ರಾಫಿಕ್ ಪೊಲೀಸನ್ನು ಎಳೆದೊಯ್ದ ಚಾಲಕ

By

Published : Apr 16, 2023, 10:19 PM IST

ಕಾರ್ ಬಾನೆಟ್​ ಮೇಲೆ ಟ್ರಾಫಿಕ್ ಪೊಲೀಸ್!

ಥಾಣೆ (ಮಹಾರಾಷ್ಟ್ರ) : ಮಾದಕ ವ್ಯಸನಿ ಎಂದು ಶಂಕಿಸಲಾದ ಚಾಲಕ, ತನ್ನ ಕಾರು ತಡೆಯಲು ಯತ್ನಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಸುಮಾರು 20 ಕಿ.ಮೀವರೆಗೆ ಬಾನೆಟ್ ಮೇಲೆ ಸಾಗಿಸಿದ ಘಟನೆ ಇಲ್ಲಿನ ಥಾಣೆಯ ವಾಶಿ ಎಂಬ ಪ್ರದೇಶದಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ 1:30 ರ ಸುಮಾರಿಗೆ ಘಟನೆ ನಡೆದಿದೆ. 37 ವರ್ಷದ ಪೊಲೀಸ್ ಸಿಬ್ಬಂದಿ ನಾಯಕ್ ಸಿದ್ದೇಶ್ವರ್ ಮಾಲಿ ಎಂಬವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ಕಾರಣಕ್ಕೆ ಬಂದೋಬಸ್ತ್ ಕರ್ತವ್ಯದಲ್ಲಿದ್ದರು ಎಂದು ತಿಳಿದುಬಂದಿದೆ.

ಕಾರು ಚಾಲಕ 22 ವರ್ಷ ವಯಸ್ಸಿನ ಆದಿತ್ಯ ಬೆಂಬ್ಡೆ ಎಂಬಾತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಕೊಲೆ ಯತ್ನ ಮತ್ತು ಎನ್‌ಡಿಪಿಎಸ್ ಕಾಯ್ದೆ ಉಲ್ಲಂಘನೆಯ ಆರೋಪದಲ್ಲಿ ಕೇಸು ದಾಖಲಾಗಿದೆ. ಸಿದ್ದೇಶ್ವರ್ ಮಾಲಿ ಮತ್ತು ಇನ್ನೋರ್ವ ಪೊಲೀಸ್ ಅಧಿಕಾರಿ ವೇಗವಾಗಿ ಬರುತ್ತಿದ್ದ ಕಾರು ನಿಲ್ಲಿಸಲು ಪ್ರಯತ್ನಿಸಿದಾಗ ಚಾಲಕ ಕಾರನ್ನು ಪೊಲೀಸ್ ಸಿಬ್ಬಂದಿಯೇ​ ಮೇಲೆಯೇ ಓಡಿಸಲು ಪ್ರಯತ್ನಿಸಿದ್ದಾನೆ. ಆಗ ಅವರು ಕಾರಿನ ಬಾನೆಟ್​ ಮೇಲೆ ಜಿಗಿದಿದ್ದಾರೆ.

ಅಪಾಯಕಾರಿ ಪರಿಸ್ಥಿತಿಯ ಹೊರತಾಗಿಯೂ ಸಿದ್ದೇಶ್ವರ್​ ಮಾಲಿ ಬಾನೆಟ್‌ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಕಾರು ನಿಲ್ಲಿಸುವ ಬದಲು ಗವ್ಹಾನ್ ಫಾಟಾ ತನಕ ಸುಮಾರು 20 ಕಿ.ಮೀ ವೇಗವಾಗಿಯೇ ಓಡಿಸಿದ್ದಾನೆ. ವಾಶಿ ಪೊಲೀಸ್ ಠಾಣೆಯ ಅಧಿಕಾರಿಯ ಪ್ರಕಾರ, ಮಾಲಿ ಹೆಚ್ಚು ಸಮಯ ಬಾನೆಟ್​ ಮೇಲೆ ಕೂರಲಾಗದೆ ವಾಹನದಿಂದ ಕೆಳಗೆ ಬಿದ್ದಿದ್ದಾರೆ. ಇತರೆ ಪೊಲೀಸರು ಕಾರು ಚಾಲಕನನ್ನು ಹಿಂಬಾಲಿಸಿ ಬಂಧಿಸಿದ್ದಾರೆ

ವೈದ್ಯಕೀಯ ಪರೀಕ್ಷೆಗಳಲ್ಲಿ ಆತ ಮಾದಕ ದ್ರವ್ಯ ಸೇವಿಸಿದ್ದು ಗೊತ್ತಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ), 353 (ಸಾರ್ವಜನಿಕ ಸೇವಕರನ್ನು ಕರ್ತವ್ಯ ನಿರ್ವಹಣೆಯಿಂದ ತಡೆಯಲು ಹಲ್ಲೆ ) ಮತ್ತು 279 (ಅತಿರೇಕ ಚಾಲನೆ ಅಥವಾ ಸವಾರಿ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ಎದುರಿಸುವ ಅಪಾಯಗಳನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಮಾದಕ ವಸ್ತುಗಳ ಪ್ರಭಾವದಲ್ಲಿರುವ ಜನರು ಇತರರನ್ನು ಅಪಾಯಕ್ಕೆ ಸಿಲುಕಿಸದಂತೆ ತಡೆಯಲು ಮಾದಕವಸ್ತು ಕಾನೂನುಗಳ ಕಟ್ಟುನಿಟ್ಟಾದ ಜಾರಿಯ ಪ್ರಾಮುಖ್ಯತೆಯನ್ನು ಪ್ರಕರಣ ಒತ್ತಿ ಹೇಳುತ್ತದೆ. ಅದೃಷ್ಟವಶಾತ್ ಅಧಿಕಾರಿ ಹೆಚ್ಚು ಗಂಭೀರವಾಗಿ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ಗನ್​ ತೋರಿಸಿ ಮಹಿಳೆಯ ಸರಗಳ್ಳತನ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ABOUT THE AUTHOR

...view details