ಕೊಯಮತ್ತೂರು: ಸಂಚಾರಿ ಪೊಲೀಸ್‌ನೋರ್ವ ಫುಡ್ ಡೆಲಿವರಿ ಮಾಡುವ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಪ್ಪಿತಸ್ಥ ಪೊಲೀಸ್ ಕಾನ್ಸ್‌ಟೇಬಲ್‌ನನ್ನು ಇಲ್ಲಿನ ನಗರದ ಪೊಲೀಸ್ ನಿಯಂತ್ರಣ ಕೊಠಡಿಗೆ ವರ್ಗಾಯಿಸಲಾಗಿದೆ.
ಶುಕ್ರವಾರ ಅವಿನಾಶಿ ರಸ್ತೆಯ ಟ್ರಾಫಿಕ್ ಜಂಕ್ಷನ್‌ನಲ್ಲಿ ಸಿಂಗಾನಲ್ಲೂರು ಪೊಲೀಸ್ ಠಾಣೆಯ ಗ್ರೇಡ್-1 ಕಾನ್‌ಸ್ಟೇಬಲ್ ಸತೀಶ್ ಡೆಲಿವರಿ ಮಾಡುವ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ. ಘಟನೆ ನಂತರ ವಿಡಿಯೋ ವೈರಲ್ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕಾನ್‌ಸ್ಟೇಬಲ್‌ನನ್ನು ನಿಯಂತ್ರಣ ಕೊಠಡಿಗೆ ವರ್ಗಾಯಿಸಿದ್ದಾರೆ.
ಫುಡ್ ಡೆಲಿವರಿ ಬಾಯ್ಗೆ ನಡುರಸ್ತೆಯಲ್ಲಿ ಥಳಿಸಿದ ಪೊಲೀಸ್ ವಿವರ: 38 ವರ್ಷದ ಮೋಹನಸುಂದರಂ ಅವರು ಕಳೆದ ಎರಡು ವರ್ಷಗಳಿಂದ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ಸಂಜೆ ಮೋಹನಸುಂದರಂ ಅವರು ಖಾಸಗಿ ಶಾಲಾ ಬಸ್ ಚಾಲಕನೊಬ್ಬನ ಅತಿರೇಕ ವಾಹನ ಚಾಲನೆಯನ್ನು ಗಮನಿಸಿ ಆತನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರಿಂದ ರಸ್ತೆಯಲ್ಲಿ ಸ್ವಲ್ಪ ಟ್ರಾಫಿಕ್ ಜಾಮ್ ಆಗಿದೆ.
ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ಕಾನ್‌ಸ್ಟೇಬಲ್ ಮೋಹನಸುಂದರಂ ಅವರಿಗೆ ಎರಡು ಬಾರಿ ನಿಂದಿಸಿ ಮತ್ತು ಕಪಾಳಮೋಕ್ಷ ಮಾಡಿದ್ದಾರೆ. ಅಷ್ಟೇ ಅಲ್ಲ, ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ. ಬೈಕ್ ಅನ್ನು ಸಹ ಹಾನಿಗೊಳಿಸಿದ್ದಾರೆ. ಈ ಘಟನೆ ಸಂಬಂಧ ಮೋಹನಸುಂದರಂ ಅವರು ಶನಿವಾರ ನಗರ ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನ ಆಧಾರದ ಮೇಲೆ ಅಧಿಕಾರಿಗಳು ಸತೀಶ್ ಅವರನ್ನು ನಿಯಂತ್ರಣ ಕೊಠಡಿಗೆ ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಾಲ್ಕು ದಿನದಿಂದ ಹಾವಿನ ಜೊತೆ ಅಜ್ಜಿಯ ವಾಸ: ಮೃತಪಟ್ಟ ಪತಿ ಉರಗ ರೂಪದಲ್ಲಿ ಬಂದ್ನಾ!?