ಕರ್ನಾಟಕ

karnataka

ETV Bharat / bharat

ಜ. 26 ಕ್ಕೆ ರ‍್ಯಾಲಿ: ಸಿಂಘು ಗಡಿಯಲ್ಲಿ ಜಮಾಯಿಸುತ್ತಿವೆ ಸಾವಿರಾರು ಟ್ರ್ಯಾಕ್ಟರ್​​ಗಳು - 26 ರಂದು ನಡೆಯಲಿರುವ ಈ ಟ್ರ್ಯಾಕ್ಟರ್​ ಮೆರವಣಿಗೆ

ಜನವರಿ 26 ರಂದು ಟ್ರ್ಯಾಕ್ಟರ್ ರ‍್ಯಾಲಿ ಹಮ್ಮಿಕೊಂಡಿರುವ ಹಿನ್ನೆಲೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಂದ ಸಿಂಘು ಗಡಿಗೆ ಸಾವಿರಾರು ಟ್ರ್ಯಾಕ್ಟರ್​​ಗಳು ಬಂದು ಜಮಾಯಿಸುತ್ತಿವೆ.

tractors ready for rally on 26th jan in singhu border
ಸಿಂಘು ಗಡಿಗೆ ಬರುತ್ತಿವೆ ಸಾವಿರಾರು ಟ್ರ್ಯಾಕ್ಟರ್​​ಗಳು

By

Published : Jan 23, 2021, 2:33 PM IST

ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್​ ರ‍್ಯಾಲಿ ಆಯೋಜಿಸಿರುವ ಹಿನ್ನೆಲೆ ದೆಹಲಿಯ ಸಿಂಘು ಗಡಿಗೆ, ಟ್ರ್ಯಾಕ್ಟರ್​ಗಳನ್ನು ಟ್ರಾಲಿಗಳ ಮೂಲಕ ತರಲಾಗುತ್ತಿದೆ.

ಸಿಂಘು ಗಡಿಗೆ ಬರುತ್ತಿವೆ ಸಾವಿರಾರು ಟ್ರ್ಯಾಕ್ಟರ್​​ಗಳು

ಇನ್ನು ಗಣರಾಜ್ಯೋತ್ಸವದಂದು ರೈತರ ಬೃಹತ್​ ರ‍್ಯಾಲಿ ಹಿನ್ನೆಲೆ ರೈತರೊಂದಿಗೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ಟ್ರ್ಯಾಕ್ಟರ್​ ಮೆರವಣಿಗೆ ನಡೆಸದಂತೆ ರೈತರ ಮನವೊಲಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಆದರೆ, ಈ ಸಭೆ ಸಫಲವಾಗಿದೆಯೇ ಎಂಬುದು ತಿಳಿದು ಬಂದಿಲ್ಲ. ಇತ್ತ ರೈತರು ದೆಹಲಿಯ ಬೀದಿ - ಬೀದಿಗಳಲ್ಲಿ ಟ್ರ್ಯಾಕ್ಟರ್​​ ರ‍್ಯಾಲಿ ನಡೆಸುವುದಾಗಿ ಪದೇ ಪದೆ ಹೇಳುತ್ತಿದ್ದಾರೆ.

ಇನ್ನು 26 ರಂದು ನಡೆಯಲಿರುವ ಈ ಟ್ರ್ಯಾಕ್ಟರ್​ ಮೆರವಣಿಗೆ ಶಾಂತಿಯುತವಾಗಿ ನಡೆಯಲಿದೆ ಎಂದು ರೈತರು ತಿಳಿಸಿದ್ದಾರೆ.

ಇದನ್ನೂ ಓದಿ:ಹೊಸೂರಲ್ಲಿ ಮುತ್ತೂಟ್​ ಫೈನಾನ್ಸ್​ಗೆ ನುಗ್ಗಿ 7 ಕೋಟಿ ಚಿನ್ನ ದರೋಡೆ: ಹೈದರಾಬಾದ್​ನಲ್ಲಿ 6 ಖದೀಮರ ಬಂಧನ!

ABOUT THE AUTHOR

...view details