ರುದ್ರಪುರ (ಉತ್ತರಾಖಂಡ): ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಸಿರ್ಸಾ ಗಡಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗುರುದ್ವಾರಕ್ಕೆ ಹೋಗುತ್ತಿದ್ದ ಭಕ್ತರ ಟ್ರ್ಯಾಕ್ಟರ್ ಅಪಘಾತಕ್ಕೊಳಗಾಗಿ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಹಾಗೆ ಹಲವರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುಪಿ ಮತ್ತು ಉತ್ತರಾಖಂಡ ಗಡಿಯ ಸಿರ್ಸಾ ಹೊರಠಾಣೆ ಬಳಿ ಭಕ್ತರು ತುಂಬಿದ್ದ ಟ್ರಾಕ್ಟರ್ ಟ್ರಾಲಿಗೆ ವಾಹನ ಡಿಕ್ಕಿ ಹೊಡೆದಿದೆ. ಈ ಘರ್ಷಣೆ ಎಷ್ಟು ಭೀಕರವಾಗಿತ್ತು ಎಂದರೆ ಟ್ರಾಲಿ ಪಲ್ಟಿಯಾಗಿದೆ. ಸಿರ್ಸಾ ಹೊರಠಾಣೆ ಪೊಲೀಸರು ದಾರಿಹೋಕರ ಸಹಾಯದಿಂದ ಗಾಯಾಳುಗಳನ್ನು ಬಹೇದಿ, ಕಿಚ್ಚಾ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.