ಮನಾಲಿ(ಹಿಮಾಚಲ ಪ್ರದೇಶ):ಹಿಮಾಚಲಪ್ರದೇಶದ ಮನಾಲಿ ಪ್ರವಾಸಿಗರ ಸ್ವರ್ಗವೇ ಸರಿ. ಅಲ್ಲಿನ ರಮಣೀಯ ಸೌಂದರ್ಯರಾಶಿ ಕಣ್ಮನ ಸೆಳೆಯುತ್ತದೆ. ಇದೀಗ ಚಳಿಗಾಲ ಶುರುವಾಗಿದ್ದು, ಮನಾಲಿ ಇನ್ನಷ್ಟು ಮುದ ನೀಡಲಿದೆ.
ಹಿಮಪಾತದ ಮಧ್ಯೆಯೇ ಹಿಮಾಚಲದ ಮನಾಲಿಗೆ ಪ್ರವಾಸಿಗರ ದಾಂಗುಡಿ ಆದರೆ, ಮನಾಲಿಯಲ್ಲಿ ಈ ಋತುವಿನಲ್ಲಿ ಎರಡನೇ ಬಾರಿಗೆ ಹಿಮಪಾತ ಉಂಟಾಗಿದೆ. ಲಾಹೌಲ್-ಸ್ಪಿಟಿಯಲ್ಲಿ ತಾಪಮಾನ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದರಿಂದ ಎತ್ತರದ ಪ್ರದೇಶಗಳಲ್ಲಿ ನೀರಿನ ಕಾರಂಜಿಗಳು, ಗಿಡ ಮರಗಳು ಚಳಿಗೆ ಹೆಪ್ಪುಗಟ್ಟುತ್ತಿವೆ.
ಏತನ್ಮಧ್ಯೆ, ಕ್ರಿಸ್‌ಮಸ್ ಹಬ್ಬದ ನಿರೀಕ್ಷೆಯಲ್ಲಿ ಪ್ರವಾಸಿಗರು ರಾಜಧಾನಿ ಶಿಮ್ಲಾ ಮತ್ತು ಇತರ ಪ್ರವಾಸಿ ಸ್ಥಳಗಳಿಗೆ ತೆರಳಲು ಪ್ರಾರಂಭಿಸಿದ್ದಾರೆ. ಹೋಟೆಲ್‌ಗಳಲ್ಲಿ ಬುಕ್ಕಿಂಗ್ ಕೂಡ ಶುರುವಾಗಿದೆ.
ಇದನ್ನೂ ಓದಿ: ಅಂತರ್ಜಾತಿ ವಿವಾಹಕ್ಕೆ ಸರ್ಕಾರ ಓಕೆ ಅಂದ್ರೂ ಸಮಾಜದಿಂದ ನಾಟ್ ಓಕೆ.. ಮಹಾರಾಷ್ಟ್ರದಲ್ಲಿ ಕೇಸ್ ದಾಖಲು
ಹೆಚ್ಚುತ್ತಿರುವ ಚಳಿಯಿಂದಾಗಿ ಜನಸಾಮಾನ್ಯರಿಗೆ ಸಮಸ್ಯೆಗಳೂ ಹೆಚ್ಚಲಿವೆ ಎನ್ನಲಾಗಿದೆ. ತೀವ್ರ ಶೀತದಿಂದಾಗಿ, ತಾಪಮಾನದಲ್ಲಿ ಭಾರೀ ಕುಸಿತ ಉಂಟಾಗಿದೆ.