ಪಣಜಿ: ಗೋವಾದ ಕಡಲತೀರದಲ್ಲಿ ಸುತ್ತಾಡಲು ಅನೇಕ ಪ್ರವಾಸಿಗರು ಇಷ್ಟಪಡುತ್ತಾರೆ. ಆದರೆ, ಕೆಲ ಹವ್ಯಾಸಿ ಹಾಗೂ ಅಶಿಸ್ತಿನ ಪ್ರವಾಸಿಗರಿಂದ ಕೆಲಮೊಮ್ಮೆ ಅಪಾಯಾಗಳು ಸಂಭವಿಸುತ್ತವೆ. ಈ ಮಾತಿಗೆ ಇಂಬು ನೀಡುವಂತೆ ಗುರುವಾರ ಒಂದು ಘಟನೆ ವರದಿಯಾಗಿದೆ. ದೆಹಲಿ ನಿವಾಸಿಯೊಬ್ಬರು ಗೋವಾದ ವಗಟೋರ್ ಬೀಚ್‌ನಲ್ಲಿ ತಮ್ಮ ಮಾಲೀಕನ ಕಾರ್ನಲ್ಲಿ ಸವಾರಿ ಮಾಡುವುದರ ಮೂಲಕ ಎಂಜಾಯ್ ಮಾಡುತ್ತಿದ್ದರು. ಆದರೆ, ಅವರ ಸಂತೋಷ ಬಹಳ ಹೊತ್ತು ಸಾಗಲಿಲ್ಲ. ಏಕೆಂದರೆ ಅವರು ಕಾರು ಸಮುದ್ರದ ದಡದಲ್ಲಿ ಸಿಲುಕಿಕೊಂಡಿದ್ದರಿಂದ ಸಂಕಷ್ಟ ಎದುರಾಯಿತು.
ಓದಿ:ಚಾಲಕನ ನಿಯಂತ್ರಣ ತಪ್ಪಿ ನೀರಿಲ್ಲದ ಬಾವಿಗೆ ಬಿದ್ದ ಕಾರು: ಮಗು ಸೇರಿ 7 ಜನರ ದುರ್ಮರಣ