ನವದೆಹಲಿ: ಇಂಗ್ಲೆಂಡ್ನಲ್ಲಿ ಪತ್ತೆಯಾದ ಹೊಸ ಪ್ರಭೇದದ ಕೋವಿಡ್ ವೈರಸ್ ನಿಧಾನವಾಗಿ ಇಡೀ ವಿಶ್ವವನ್ನು ಆವರಿಸುತ್ತಿದ್ದು, ಭಾರತದಲ್ಲಿ ಇಂದು ಮತ್ತೆ 9 ಮಂದಿಗೆ ರೂಪಾಂತರಿ ವೈರಸ್ ಅಂಟಿರುವುದು ದೃಢವಾಗಿದೆ.
ಜನವರಿ 1ರವರೆಗೆ ದೇಶದಲ್ಲಿ 29 ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಇವುಗಳಲ್ಲಿ 10 ಕೇಸ್ಗಳು ಕರ್ನಾಟಕದಲ್ಲೇ ವರದಿಯಾಗಿದ್ದವು. ಇದೀಗ 9 ಜನರಿಗೆ ಈ ಸೋಂಕು ತಗುಲಿದ್ದು, ದೇಶದಲ್ಲಿನ ರೂಪಾಂತರಿ ಕೊರೊನಾ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ನಾನು ಕೋವಿಡ್ ಲಸಿಕೆ ಪಡೆಯಲ್ಲ; ಶಿವರಾಜ್ ಸಿಂಗ್ ಚೌಹಾಣ್ ಈ ರೀತಿ ಹೇಳಿದ್ಯಾಕೆ!?
ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (NIV), ಬೆಂಗಳೂರಿನ ನಿಮ್ಹಾನ್ಸ್, ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (IGIB) ಹಾಗೂ ಹೈದರಾಬಾದ್ನ ಪ್ರಯೋಗಾಲಯ ಸೇರಿದಂತೆ ದೇಶದಾದ್ಯಂತ ಒಟ್ಟು 10 ಲ್ಯಾಬ್ಗಳಲ್ಲಿ ಬ್ರಿಟನ್ ಸೋಂಕು ಪತ್ತೆ ಹಚ್ಚಲು ಪರೀಕ್ಷೆ ನಡೆಸಲಾಗುತ್ತಿದೆ.
ಸದ್ಯ ಎಲ್ಲಾ 38 ಸೋಂಕಿತರನ್ನು ಆರೋಗ್ಯ ಕೇಂದ್ರದಲ್ಲಿ ಒಂದೇ ಕೋಣೆಯಲ್ಲಿ ಐಸೋಲೇಷನ್ನಲ್ಲಿರಿಸಲಾಗಿದೆ.