ನವದೆಹಲಿ: ಮಹಾಮಾರಿಯಿಂದ ಚೇತರಿಸಿಕೊಳ್ಳುತ್ತಿದ್ದ ಭಾರತದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಶುರುವಾಗಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 60 ಸಾವಿರ ಸನಿಹ (59,118) ಸೋಂಕಿತರು ಪತ್ತೆಯಾಗಿದ್ದು, 257 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 1,18,46,652, ಮೃತರ ಸಂಖ್ಯೆ 1,60,949 ಹಾಗೂ ಆ್ಯಕ್ಟೀವ್ ಕೇಸ್ಗಳ ಸಂಖ್ಯೆ 4,21,066ಕ್ಕೆ ಹೆಚ್ಚಳವಾಗಿದೆ. ಕೊರೊನಾ ವ್ಯಾಕ್ಸಿನೇಷನ್ ಪ್ರಮಾಣ ಕೂಡ ಹೆಚ್ಚಿಸಲಾಗುತ್ತಿದ್ದು, ಜನವರಿ 16ರಿಂದ ಈವರೆಗೆ ಒಟ್ಟು 5,55,04,440 ಮಂದಿಗೆ ಲಸಿಕೆ ನೀಡಲಾಗಿದೆ.