ಕರ್ನಾಟಕ

karnataka

ETV Bharat / bharat

ದೇಶಾದ್ಯಂತ 3.29 ಕೋಟಿ ಮಂದಿಗೆ ಲಸಿಕೆ.. ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ 2.23 ಲಕ್ಷಕ್ಕೆ ಏರಿಕೆ

ದಿನೇ ದಿನೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿರುವುದರಿಂದ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ ಕೂಡ 2,23,432ಕ್ಕೆ ಏರಿಕೆಯಾಗಿದೆ.

Total number of corona cases, deaths, Vaccination in India
ದೇಶಾದ್ಯಂತ 3.29 ಕೋಟಿ ಮಂದಿಗೆ ಲಸಿಕೆ

By

Published : Mar 16, 2021, 9:45 AM IST

ನವದೆಹಲಿ: ಸೋಮವಾರ ಮತ್ತೆ 24,492 ಹೊಸ ಕೋವಿಡ್​ ಕೇಸ್​ಗಳು ಪತ್ತೆಯಾಗಿದ್ದು, 131 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,14,09,831 ಹಾಗೂ ಮೃತರ ಸಂಖ್ಯೆ 1,58,856ಕ್ಕೆ ಏರಿಕೆಯಾಗಿದೆ. ಜನವರಿ 16ರಿಂದ ಈವರೆಗೆ 3,29,47,432 ಮಂದಿಗೆ ಲಸಿಕೆ ನೀಡಲಾಗಿದೆ.

ಒಟ್ಟು ಸೋಂಕಿತರ ಪೈಕಿ 1,10,27,543 ಜನರು ಗುಣಮುಖರಾಗಿದ್ದಾರೆ. ಆದರೆ, ದಿನೇ ದಿನೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿರುವುದರಿಂದ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ ಕೂಡ 2,23,432ಕ್ಕೆ ಏರಿಕೆಯಾಗಿರುವುದಾಗಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಇದನ್ನೂ ಓದಿ: ಲಸಿಕೆ ಕುರಿತ ವದಂತಿ ಹರಡಲು ಸೋಷಿಯಲ್​ ಮೀಡಿಯಾ ಬಳಕೆದಾರರೇ ಕಾರಣ: ಫೇಸ್‌ಬುಕ್

ಮಾರ್ಚ್​​ 15ರ ವರೆಗೆ 22,82,80,763 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 8,73,350 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details