ನವದೆಹಲಿ:ಕಳೆದ 24 ಗಂಟೆಗಳಲ್ಲಿ 10,584 ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 78 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಪ್ರಕರಣಗಳ ಸಂಖ್ಯೆ 1,10,16,434 ಹಾಗೂ ಮೃತರ ಸಂಖ್ಯೆ 1,56,463ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 1,07,12,665 ಮಂದಿ ಗುಣಮುಖರಾಗಿದ್ದು, 1,47,306 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲೇ ಹೆಚ್ಚು ಕೇಸ್ಗಳು ಆ್ಯಕ್ಟಿವ್ ಆಗಿವೆ.