ನವದೆಹಲಿ: ಕಳೆದ 24 ಗಂಟೆಗಳಲ್ಲಿ 13,993 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 101 ಮಂದಿಯನ್ನು ವೈರಸ್ ಬಲಿ ಪಡೆದಿದೆ. ಭಾರತದಲ್ಲಿ ಇದೀಗ ಪ್ರಕರಣಗಳ ಸಂಖ್ಯೆ 1,09,77,387 ಹಾಗೂ ಮೃತರ ಸಂಖ್ಯೆ 1,56,212ಕ್ಕೆ ಏರಿಕೆಯಾಗಿದೆ.
ಫೆಬ್ರವರಿ 19ರ ವರೆಗೆ 21 ಕೋಟಿಗೂ ಹೆಚ್ಚು (21,02,61,480) ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,86,618 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
ಕೋವಿಡ್ ಟೆಸ್ಟಿಂಗ್ ಅಪ್ಡೇಟ್ಸ್ ಇದನ್ನೂ ಓದಿ: ಇಂದು ಭಾರತ - ಚೀನಾ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ
ಈವರೆಗೆ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು ಸೇರಿ 1,07,15,204 ಮಂದಿಗೆ ಲಸಿಕೆ ನೀಡಲಾಗಿದೆ.
ಒಟ್ಟು 1.07 ಕೋಟಿ ಸೋಂಕಿತರ ಪೈಕಿ 1,06,78,048 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಉಳಿದಂತೆ 1,43,127 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.