ಕರ್ನಾಟಕ

karnataka

By

Published : Feb 11, 2021, 10:37 AM IST

ETV Bharat / bharat

ಭಾರತದಲ್ಲಿ 1.5 ಕೋಟಿ ಸೋಂಕಿತರು ಗುಣಮುಖ.. 70 ಲಕ್ಷ ಮಂದಿಗೆ ಲಸಿಕೆ

ದೇಶದಲ್ಲಿ ಶೇ.97ಕ್ಕೂ ಅಧಿಕ ಅಂದರೆ 1,05,73,372 ಮಂದಿ ಮಹಾಮಾರಿ ಕೋವಿಡ್​ನಿಂದ ಚೇತರಿಸಿಕೊಂಡಿದ್ದಾರೆ.

Total number of corona cases, deaths, Vaccination in India
70 ಲಕ್ಷ ಮಂದಿಗೆ ಲಸಿಕೆ

ನವದೆಹಲಿ: ಭಾರತದಲ್ಲಿ ವಿಶ್ವದ ಅತಿದೊಡ್ಡ ಕೋವಿಡ್​ ವ್ಯಾಕ್ಸಿನೇಷನ್​ ಅಭಿಯಾನ ನಡೆಯುತ್ತಿದ್ದು, ಈವರೆಗೆ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್​ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು ಸೇರಿ 70,17,114 ಮಂದಿಗೆ ಲಸಿಕೆ ನೀಡಲಾಗಿದೆ.

ಶೇ.97ಕ್ಕೂ ಅಧಿಕ ಕೊರೊನಾ ಸೋಂಕಿತರ ಗುಣಮುಖ

ಕಳೆದ 24 ಗಂಟೆಗಳಲ್ಲಿ 12,923 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 108 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,08,71,294 ಹಾಗೂ ಮೃತರ ಸಂಖ್ಯೆ 1,55,36ಕ್ಕೆ ಏರಿಕೆಯಾಗಿದೆ. ಆದರೆ ಶೇ.97ಕ್ಕೂ ಅಧಿಕ ಅಂದರೆ 1,05,73,372 ಮಂದಿ ಮಹಾಮಾರಿ ಕೋವಿಡ್​ನಿಂದ ಚೇತರಿಸಿಕೊಂಡಿದ್ದಾರೆ. ಉಳಿದಂತೆ 1,42,562 ಕೇಸ್​​ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಫೆಬ್ರವರಿ​ 10ರ ವರೆಗೆ 20,40,23,840 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 6,99,185 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details