ಕರ್ನಾಟಕ

karnataka

ETV Bharat / bharat

ಒಂದು ವರ್ಷದಲ್ಲಿ ದೇಶಾದ್ಯಂತ 1.7 ಕೋಟಿ ಜನರಿಗೆ ಅಂಟಿದ ಕೊರೊನಾ.. ಎಷ್ಟು ಮಂದಿ ಬಲಿ? - ಆರೋಗ್ಯ ಇಲಾಖೆ ಟ್ವೀಟ್​

ಒಂದು ವರ್ಷದೊಳಗಾಗಿ ಎರಡು ದೇಶೀಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿರುವ ಭಾರತವು ಈವರೆಗೆ 37,06,157 ಮಂದಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್​ ನೀಡಿದೆ. ದೇಶಾದ್ಯಂತ ಒಂದು ವರ್ಷದಲ್ಲಿ 1.7 ಕೋಟಿ ಜನರಿಗೆ ಮಹಾಮಾರಿ ಕೊರೊನಾ ವಕ್ಕರಿಸಿದ್ದರೆ, 1,54,274 ಮಂದಿ ಬಲಿಯಾಗಿದ್ದಾರೆ.

Total number of corona cases and deaths in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

By

Published : Jan 31, 2021, 11:15 AM IST

ನವದೆಹಲಿ: ಜಾಗತಿಕ ಮಹಾಮಾರಿ ಕೊರೊನಾ ವೈರಸ್​ ಭಾರತಕ್ಕೆ ಕಾಲಿಟ್ಟು ಶನಿವಾರ(ಜ.30-2021)ಕ್ಕೆ ಸರಿಯಾಗಿ ಒಂದು ವರ್ಷ ಸಂದಿದೆ. ಚೀನಾದ ವುಹಾನ್​ನಿಂದ ಕೇರಳದ ತ್ರಿಶೂರ್​ಗೆ ಬಂದಿದ್ದ ವಿದ್ಯಾರ್ಥಿಗೆ ಸೋಂಕು ತಗುಲಿರುವುದು ದೃಢವಾಗಿತ್ತು. ಸಾಂಕ್ರಾಮಿಕದ ಈ ಒಂದು ವರ್ಷದಲ್ಲಿ 1,07,46,183 ಮಂದಿಗೆ ವೈರಸ್​ ಅಂಟಿದ್ದು, 1,54,274 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 13,052 ಸೋಂಕಿತರು ಪತ್ತೆಯಾಗಿದ್ದು, 127 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾ ವಿರುದ್ಧ ಭಾರತದ ಕಠಿಣ ಹೋರಾಟದಿಂದಾಗಿ 1.7 ಕೋಟಿ ಸೋಂಕಿತರ ಪೈಕಿ 1,04,23,125 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ 1,68,784 ಕೇಸ್​​ಗಳು ಮಾತ್ರ ಸಕ್ರಿಯವಾಗಿವೆ.

ಈವರೆಗೆ 37,06,157 ಮಂದಿಗೆ ಲಸಿಕೆ

ಒಂದು ವರ್ಷದೊಳಗಾಗಿ ಎರಡು ದೇಶೀಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿರುವ ಭಾರತವು ಈವರೆಗೆ 37,06,157 ಮಂದಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್​ ನೀಡಿದೆ. ನಿನ್ನೆ ಒಂದೇ ದಿನ 2,06,130 ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಜನವರಿ​ 30ರ ವರೆಗೆ 19,65,88,372 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ಶನಿವಾರ ಒಂದೇ ದಿನ 7,50,964 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details