ನವದೆಹಲಿ : ದೇಶದಲ್ಲಿ ಕಳೆದ ಕೆಲ ವಾರಗಳಿಂದ ಪ್ರತಿನಿತ್ಯ ಪತ್ತೆಯಾಗುತ್ತಿರುವ ಹೊಸ ಕೊರೊನಾ ಸೋಂಕಿತರಿಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆಯೇ ಹೆಚ್ಚಿದೆ. ನಿನ್ನೆ 50,357 ಕೇಸ್ಗಳು ವರದಿಯಾಗಿದ್ದರೆ, 53,920 ಜನ ಗುಣಮುಖರಾಗಿದ್ದಾರೆ.
ಕೋವಿಡ್ಗೆ ಭಾರತದಲ್ಲಿ 1.25 ಲಕ್ಷ ಜನ ಬಲಿ.. 78 ಲಕ್ಷ ಮಂದಿ ಗುಣಮುಖ - ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ
ಭಾರತದಲ್ಲಿನ ಒಟ್ಟಾರೆ 84 ಲಕ್ಷ ಸೋಂಕಿತರಲ್ಲಿ 78 ಲಕ್ಷ ಮಂದಿ ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ. 5 ಲಕ್ಷ ಕೇಸ್ ಮಾತ್ರ ಸಕ್ರಿಯವಾಗಿವೆ..
![ಕೋವಿಡ್ಗೆ ಭಾರತದಲ್ಲಿ 1.25 ಲಕ್ಷ ಜನ ಬಲಿ.. 78 ಲಕ್ಷ ಮಂದಿ ಗುಣಮುಖ Total number of corona cases and deaths in India](https://etvbharatimages.akamaized.net/etvbharat/prod-images/768-512-9461867-thumbnail-3x2-megha.jpg)
ಕಳೆದ 24 ಗಂಟೆಗಳಲ್ಲಿ 577 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 84,62,081 ಹಾಗೂ ಮೃತರ ಸಂಖ್ಯೆ 1,25,562ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 78,19,887 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 5,16,632 ಕೇಸ್ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನವೆಂಬರ್ 6ರವರೆಗೆ 11,65,42,304 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ನಿನ್ನೆ ಒಂದೇ ದಿನ 11,13,209 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.