ಕರ್ನಾಟಕ

karnataka

ETV Bharat / bharat

ಉಲ್ಫಾ ಉಗ್ರ ಸಂಘಟನೆಯ ಕಮಾಂಡರ್ ಸೇರಿ ಐವರು ಸೇನೆಗೆ ಶರಣು - ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸೋಂ

ಅಸ್ಸೋಂ ಸಂಯುಕ್ತ ವಿಮೋಚನಾ ರಂಗ (ಸ್ವತಂತ್ರ) 'ಕಮಾಂಡರ್-ಇನ್-ಚೀಫ್' ಎಂದು ಕರೆಯಲ್ಪಡುವ ಪರೇಶ್ ಬರುವಾ ಆಪ್ತನಾಗಿರುವ ಕಮಾಂಡರ್ ರಾಜ್​ಖೋವಾ ಸೇರಿದಂತೆ ಐವರು ಉಗ್ರರು ಭಾರತೀಯ ಸೇನೆಗೆ ಶರಣಾಗಿದ್ದಾರೆ.

ULFA leader surrenders in Meghalaya
ಉಲ್ಫಾ ಉಗ್ರ ಸಂಘಟನೆಯ ಕಮಾಂಡರ್ ಭದ್ರತಾ ಪಡೆಗೆ ಶರಣು

By

Published : Nov 12, 2020, 9:32 AM IST

Updated : Nov 12, 2020, 10:52 AM IST

ನವದೆಹಲಿ:ಉಲ್ಫಾ(ಅಸ್ಸೋಂ ಸಂಯುಕ್ತ ವಿಮೋಚನಾ ರಂಗ) ಉಗ್ರ ಸಂಘಟನೆಯ ಎರಡನೇ ದರ್ಜೆಯ ಕಮಾಂಡರ್ ರಾಜ್​ಖೋವಾ ಸೇರಿದಂತೆ ಐವರು ಮೇಘಾಲಯದಲ್ಲಿ ಶರಣಾಗಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ರಾಜ್‌ಕೋವಾ ಪ್ರಸ್ತುತ ಸೇನಾ ಗುಪ್ತಚರದ ವಶದಲ್ಲಿದ್ದು, ಅವನನ್ನು ಅಸ್ಸೋಂಗೆ ಕರೆತರಲಾಗುತ್ತಿದೆ ಎಂದು ಹೇಳಿದ್ದಾರೆ. ಆತ ಅಸ್ಸೋಂ ಸಂಯುಕ್ತ ವಿಮೋಚನಾ ರಂಗ (ಸ್ವತಂತ್ರ) 'ಕಮಾಂಡರ್-ಇನ್-ಚೀಫ್' ಎಂದು ಕರೆಯಲ್ಪಡುವ ಪರೇಶ್ ಬರುವಾ ಅವರ ಆಪ್ತನಾಗಿದ್ದಾನೆ.

'ಮೇಘಾಲಯ-ಅಸ್ಸೋಂ- ಬಾಂಗ್ಲಾದೇಶ ಗಡಿಯಲ್ಲಿ ಭಾರತೀಯ ಸೇನಾ ಗುಪ್ತಚರ ಸಂಸ್ಥೆಗಳು ನಡೆಸಿದ ತ್ವರಿತ ಮತ್ತು ಯೋಜಿತ ಕಾರ್ಯಾಚರಣೆಯಲ್ಲಿ, ರಾಜ್​ಖೋವಾ ಜೊತೆ ನಾಲ್ವರು ಸಹಚರರು ಕೂಡ ಶರಣಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ' ಎಂದು ಸೇನಾ ಮೂಲಗಳು ತಿಳಿಸಿವೆ.

ರಾಜ್‌ಕೋವಾ ಇತ್ತೀಚಿನವರೆಗೂ ಬಾಂಗ್ಲಾದೇಶದಲ್ಲಿ ನೆಲೆಸಿದ್ದ. ಕೆಲವು ವಾರಗಳ ಹಿಂದೆ ಮೇಘಾಲಯಕ್ಕೆ ಬಂದಿದ್ದ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಈತನ ಶರಣಾಗತಿಯಿಂದ ಉಗ್ರಗಾಮಿ ಗುಂಪಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಹಿರಿಯ ಭದ್ರತಾ ತಜ್ಞರು ವಿಶ್ಲೇಷಿಸಿದ್ದಾರೆ.

ಉಲ್ಫಾ (ಐ) ಸ್ವತಂತ್ರ ಅಸ್ಸೋಂ ರಾಜ್ಯಕ್ಕೆ ಒತ್ತಾಯಿಸುತ್ತಿದೆ. 1990 ರಲ್ಲಿ ಸರ್ಕಾರ ಈ ಸಂಘಟನೆಯನ್ನು ನಿಷೇಧಿಸಿತ್ತು.

Last Updated : Nov 12, 2020, 10:52 AM IST

ABOUT THE AUTHOR

...view details