ನವದೆಹಲಿ: ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರೇಜ್ ಎಷ್ಟಿದೆ ಅಂದರೆ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ ವಿಷಯದಲ್ಲಿ ಕೊರೊನಾ ವೈರಸ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ.
ಗೂಗಲ್ ಇಂಡಿಯಾ 2020ರ ಹುಡುಕಾಟದ ಬಗ್ಗೆ ಮಾಹಿತಿ ನೀಡಿದ್ದು, ಅತ್ಯಂತ ಹೆಚ್ಚು ಹುಡುಕಾಟ ನಡೆಸಿದ ವಿಷಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಎಂದು ಬಹಿರಂಗಪಡಿಸಿದೆ. ಕೊರೊನಾ ವೈರಸ್ ಹೆಚ್ಚು ಸರ್ಚ್ ಆಗಿರುವ ವಿಷಯಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಗೂಗಲ್ ಪ್ರಕಾರ 2020ರಲ್ಲಿ ಬಿಹಾರ ಮತ್ತು ದೆಹಲಿ ಚುನಾವಣಾ ಫಲಿತಾಂಶಗಳು, ಜೋ ಬೈಡನ್ ಮತ್ತು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ದಿಲ್ ಬೆಚರಾ ಅವರೊಂದಿಗೆ ಸಾಕಷ್ಟು ಹುಡುಕಾಟಗಳನ್ನು ಸೃಷ್ಟಿಸಿದೆ. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್ ಸ್ಕೀಮ್) ಟಾಪ್ ಟ್ರೆಂಡಿಂಗ್ನ ಭಾಗವಾಗಿವೆ.
2020ರಲ್ಲಿ ಜಾಗತಿಕವಾಗಿ, ಕೊರೊನಾ ವೈರಸ್ ಟಾಪ್ ಟ್ರೆಂಡಿಂಗ್ ಅಂಶವಾಗಿದೆ. ಅಮೆರಿಕ ಚುನಾವಣೆ ಫಲಿತಾಂಶ, ಜೂಮ್, ಐಪಿಎಲ್ ಮತ್ತು ಇಂಡಿಯಾ vs ನ್ಯೂಜಿಲೆಂಡ್ ಪಂದ್ಯಗಳು ಸಹ ಟಾಪ್ 10 ಸ್ಥಾನಗಳಲ್ಲಿವೆ.