ಕರ್ನಾಟಕ

karnataka

ETV Bharat / bharat

Make in India ಯೋಜನೆ: ಎಸಿ, ಎಲ್​​​ಇಡಿ ಲೈಟ್ ತಯಾರಿಕೆಗೆ ಮುಂದಾದ ಬಹುರಾಷ್ಟ್ರೀಯ ಕಂಪನಿಗಳು

ಸರ್ಕಾರದಿಂದ ಮೇಕ್ ಇಂಡಿಯಾ ಯೋಜನೆಯಡಿ ಮುಂದಿನ 5 ವರ್ಷದೊಳಗೆ 2.71 ಲಕ್ಷ ಕೋಟಿ ಬಿಳಿ ಸರಕು ಉತ್ಪಾದನೆ ಗುರಿ ಹೊಂದಲಾಗಿದೆ. ಈ ಹಿನ್ನೆಲೆ ಪಿಎಲ್​ಐ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

Make in India
Make in India

By

Published : Sep 17, 2021, 10:02 AM IST

ನವದೆಹಲಿ:ಬಿಳಿ ಸರಕುಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರದ ಪ್ರೊಡಕ್ಷನ್ ಲಿಂಕಡ್ ಇನ್​ಸೆಂಟೀವ್ (ಪಿಎಲ್​ಐ) ಉತ್ತೇಜಕ ಪ್ರಕ್ರಿಯೆಯಾಗಿ ದೇಶದಲ್ಲಿ ಜಾಗತಿಕ ಬ್ರಾಂಡ್​​ಗಳು ಹೂಡಿಕೆ ಮಾಡಲು ಮುಂದಾಗಿವೆ. ಇದರಡಿಯಲ್ಲಿ ಎಸಿ ಉಪಕರಣ ಮತ್ತು ಎಲ್​ಇಡಿ ಲೈಟ್ಸ್ ತಯಾರಿಕೆಗಾಗಿ ಜಾಗತಿಕ ಕಂಪನಿಗಳು 5,800 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿವೆ.

ಮುಂದಿನ 5 ವರ್ಷದ ಅಂತರದಲ್ಲಿ ಸುಮಾರು 2.71 ಲಕ್ಷ ಕೋಟಿ ಬಿಳಿ ಸರಕು ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಬಹುರಾಷ್ಟ್ರೀತ ಕಂಪನಿಗಳಾದ ಡೈಕಿನ್, ಪ್ಯಾನಸೋನಿಕ್, ಹಿಟಾಚಿ, ನೈಡೆಕ್, ಬ್ಲೂಸ್ಟಾರ್, ವೋಲ್ಟಾಸ್, ಹೆವೆಲ್ಸ್, ಅಂಬರ್, ಇ-ಪ್ಯಾಕ್, ಟಿವಿಎಸ್​, ಡಿಕ್ಸಾನ್, ಆರ್​.ಕೆ ಲೈಟ್ನಿಂಗ್, ರಾಧಿಕಾ ಒಪ್ಟೊ, ಸಿಸ್ಕಾ ಸೇರಿದಂತೆ ಹಲವು ಕಂಪನಿಗಳು ಎಸಿ ಮತ್ತು ಎಲ್​ಇಡಿ ಲೈಟ್ ತಯಾರಿಕಾ ಘಟಕ ತೆರೆಯಲು ಅರ್ಜಿ ಸಲ್ಲಿಸಲಿವೆ ಎಂದು ಮೂಲಗಳು ತಿಳಿಸಿವೆ.

5 ಸಾವಿರ ಕೋಟಿ ರೂ ಹೂಡಿಕೆ

ಇದರಲ್ಲಿ 31 ಕಂಪನಿಗಳು ಎಸಿ ತಯಾರಿಕೆಗಾಗಿ ಸುಮಾರು 5,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಿಕೊಂಡಿವೆ ಮತ್ತು 21 ಕಂಪನಿಗಳು ಎಲ್ಇಡಿ ಲೈಟ್​ ತಯಾರಿಕಾ ಘಟಕಗಳಿಗಾಗಿ 871 ಕೋಟಿ ರೂಪಾಯಿಗಳ ಹೂಡಿಕೆ ಮಾಡಿಕೊಂಡಿವೆ.

ಭಾರತದಲ್ಲಿ ಉತ್ತಮ ಪ್ರಮಾಣದಲ್ಲಿ ತಯಾರಿಸದ ಘಟಕಗಳ ಉತ್ಪಾದನೆಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಏರ್ ಕಂಡಿಷನರ್‌ಗಳಿಗಾಗಿ, ಹಲವಾರು ಕಂಪನಿಗಳು ಕಂಪ್ರೆಸರ್‌ಗಳು, ತಾಮ್ರದ ಕೊಳವೆಗಳು, ಫಾಯಿಲ್‌ಗಳಿಗಾಗಿ ಅಲ್ಯೂಮಿನಿಯಂ ಸ್ಟಾಕ್, IDU ಅಥವಾ ODU ಗಾಗಿ ಕಂಟ್ರೋಲ್ ಅಸೆಂಬ್ಲಿಗಳು, ಡಿಸ್​​​ಪ್ಲೆ ಘಟಕಗಳು, ಮೋಟಾರ್‌ಗಳನ್ನು ಸೇರಿ ಇತರ ಬಿಡಿಭಾಗಗಳನ್ನು ತಯಾರಿಸಲಿವೆ.

ಭಾರತದಲ್ಲೇ ತಯಾರಿಕೆ

ಅದೇ ರೀತಿ ಎಲ್ಇಡಿ ದೀಪಗಳಿಗಾಗಿ ಎಲ್ಇಡಿ ಚಿಪ್ ಪ್ಯಾಕೇಜಿಂಗ್, ಎಲ್ಇಡಿ ಎಂಜಿನ್​ಗಳು, ಎಲ್ಇಡಿ ಲೈಟ್ ಮ್ಯಾನೇಜ್ಮೆಂಟ್ ಸಿಸ್ಟಂ, ಮೆಟಲ್ ಕ್ಲಾಡ್ ಪಿಸಿಬಿಗಳ ಒಳಗೊಂಡ ಪಿಸಿಬಿಗಳನ್ನು ದೇಶದಲ್ಲಿ ತಯಾರಿಸಲಾಗುತ್ತದೆ.

ಈ ವರ್ಷದ ಏಪ್ರಿಲ್‌ನಲ್ಲಿ, ಬಿಳಿ ಸರಕುಗಳ ವಲಯಕ್ಕೆ ಮುಂದಿನ 5 ವರ್ಷಗಳವರೆಗೆ 6,238 ಕೋಟಿ ರೂ.ಗಳ ಪಿಎಲ್‌ಐ ಯೋಜನೆಯನ್ನು ಸರ್ಕಾರ ಅನುಮೋದಿಸಿತು. ಈ ಯೋಜನೆ ಅನ್ವಯ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆ ದಿನಾಂಕವಾಗಿತ್ತು. ಈ ಅರ್ಜಿಗಳ ಬಗ್ಗೆ ಸರ್ಕಾರ ಎರಡು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ:ನಿರ್ಮಾಣ ಹಂತದ ಸೇತುವೆ ಕುಸಿತ: 14 ಕಾರ್ಮಿಕರಿಗೆ ಗಾಯ

ABOUT THE AUTHOR

...view details