ನವದೆಹಲಿ:ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೂಲ್ ಕಿಟ್ ಹಂಚಿದ ಪ್ರಕರಣದ ಸಹ ಆರೋಪಿ ನಿಕಿತಾ ಜಾಕೋಬ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ಟೂಲ್ ಕಿಟ್ ಪ್ರಕರಣ: ಇಂದು ಆರೋಪಿ ನಿಕಿತಾ ಜಾಕೋಬ್ ಜಾಮೀನು ಅರ್ಜಿ ವಿಚಾರಣೆ - ನಿಕಿತಾ ಜಾಕೋಬ್
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೂಲ್ ಕಿಟ್ ಹಂಚಿದ ಪ್ರಕರಣದ ಆರೋಪಿಯಾಗಿರುವ ವಕೀಲೆ ನಿಕಿತಾ ಜಾಕೋಬ್ ಅವರ ಜಾಮೀನು ಅರ್ಜಿಯನ್ನು ಇಂದು ಪಟಿಯಾಲ ಕೋರ್ಟ್ ವಿಚಾರಣೆ ನಡೆಸಲಿದೆ.
ಟೂಲ್ಕಿಟ್ ಪ್ರಕರಣ
ನಿಕಿತಾ ಜಾಕೋಬ್ ಅವರ ಜಾಮೀನು ಅರ್ಜಿಯನ್ನು ಪಟಿಯಾಲ ಹೌಸ್ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ. ನಿಕಿತಾ ಜಾಕೋಬ್, ಹವಾಮಾನ ಹಾಗೂ ಪರಿಸರ ಕಾರ್ಯಕರ್ತೆ ದಿಶಾ ರವಿ ಮತ್ತು ಶಾಂತನು ಮುಲುಕ್ ಅವರೊಂದಿಗೆ ರೈತರ ಆಂದೋಲನಕ್ಕೆ ಸಂಬಂಧಿಸಿದ ' ಟೂಲ್ಕಿಟ್' ಹಂಚಿಕೆ ಮತ್ತು ದೇಶದ್ರೋಹದ ಆರೋಪ ಎದುರಿಸುತ್ತಿದ್ದಾರೆ.
ಮುಲುಕ್ ಮತ್ತು ನಿಕಿತಾ ಜಾಕೋಬ್ ಫೆಬ್ರವರಿ 22 ರಂದು ದ್ವಾರಕಾದ ದೆಹಲಿ ಪೊಲೀಸರ ಸೈಬರ್ ಸೆಲ್ ಕಚೇರಿಯಲ್ಲಿ ತನಿಖೆಗೆ ಹಾಜರಾಗಿದ್ದರು. ಪ್ರಕರಣದಲ್ಲಿ ಬಂಧಿತರಾಗಿದ್ದ ದಿಶಾ ರವಿಯವರನ್ನು ಫೆಬ್ರವರಿ 23 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.