ನವದೆಹಲಿ:ಮಾನವನ ದುರಾಸೆಯಿಂದ ಪ್ರಕೃತಿ ನಶಿಸುತ್ತಿದೆ. ಮರಗಳನ್ನು ಕಡಿದು ನಗರ ನಿರ್ಮಾಣ, ತ್ಯಾಜ್ಯವನ್ನು ಬಯಲು ಪ್ರದೇಶ, ಸಮುದ್ರಕ್ಕೆಸೆದು ಸುಂದರ ಪರಿಸರ ವ್ಯವಸ್ಥೆಯನ್ನೇ ಹಾಳು ಮಾಡಲಾಗುತ್ತಿದೆ. ಹೀಗೆ ಮಾಡಿದ ಮನುಷ್ಯನಿಗೆ ಅದೇ ಪ್ರಕೃತಿ ಪ್ರತಿಯಾಗಿ ನೀಡಿದ ಕೊಡುಗೆಯನ್ನು ಮುಂಬೈ ಬೀಚ್‌ನಲ್ಲಿ ಕಾಣಬಹುದು!.
ಅರಬ್ಬಿ ಸಮುದ್ರದ ದಡದಲ್ಲಿರುವ ಮುಂಬೈ ನಗರಿಗೆ ನಿಸರ್ಗ ತನ್ನದೇ ಆದ ರೀತಿಯಲ್ಲಿ ಕೊಟ್ಟಿರುವ ಎಚ್ಚರಿಕೆ ಇದು. ಸಾವಿರಾರು ಟನ್‌ಗಟ್ಟಲೆ ಪ್ರಮಾಣದಲ್ಲಿ ಬಿಸಾಡಲಾಗಿದ್ದ ತ್ಯಾಜ್ಯವನ್ನು ಸಮುದ್ರ ವಾಪಸ್ ತಂದು ಮಾಹಿಮ್ ಬೀಚ್‌ನಲ್ಲಿ ಬಿಟ್ಟಿದೆ. ಇದು ನಿಸರ್ಗ ನೀಡಿದ 'ರಿಟರ್ನ್ ಗಿಫ್ಟ್' ಅಲ್ಲದೆ ಮತ್ತೇನು ಹೇಳಿ?.
ಮುಂಬೈ ಬೀಚ್ನುದ್ದಕ್ಕೂ ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹರಡಿಕೊಂಡಿರುವುದನ್ನು ವಿಡಿಯೋದಲ್ಲಿ ನೀವು ಕಾಣುವಿರಿ. ಜನರು ಈ ಕಸದ ಮಧ್ಯೆಯೇ ನಿಂತಿದ್ದಾರೆ. 10 ಸೆಕೆಂಡ್ಗಳ ವಿಡಿಯೋ ಜನರ ಪರಿಸರ ಪ್ರಜ್ಞೆಯನ್ನು ಬಡಿದೆಬ್ಬಿಸುವಂತಿದೆ.