ಕರ್ನಾಟಕ

karnataka

ETV Bharat / bharat

Tomato price : ಸೇಬಿಗಿಂತ ದುಬಾರಿಯಾದ ಟೊಮೆಟೊ ! - ಟೊಮೆಟೊ

ಹಿಮಾಚಲ ಪ್ರದೇಶದ ಸೋಲನ್​ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಸೇಬಿಗಿಂತ ದುಬಾರಿಯಾಗಿದೆ. ಪ್ರತಿ ಸೇಬು 70ರಿಂದ 80 ರೂಪಾಯಿಗೆ ಮಾರಾಟವಾದರೆ, ಟೊಮೆಟೊ 100ರ ಗಡಿ ದಾಟಿ ಸೇಬಿಗೆ ಸೆಡ್ಡು ಹೊಡೆದಿದೆ.

Etv tomatoes-turn-costlier-than-apples-at-himachal-pradeshs-solan-market
Tomato price : ಸೇಬಿಗಿಂತ ದುಬಾರಿಯಾದ ಟೊಮೆಟೊ !

By

Published : Jul 4, 2023, 3:06 PM IST

ಸೋಲನ್ (ಹಿಮಾಚಲ ಪ್ರದೇಶ): ಹಿಮದಿಂದ ಆವೃತವಾಗಿರುವ ಹಿಮಾಚಲ ಪ್ರದೇಶದಲ್ಲಿ ಸೇಬು ವಾಣಿಜ್ಯ ಬೆಳೆ. ಅದೇ ಇಲ್ಲಿನ ಆರ್ಥಿಕತೆಯ ಜೀವಾಳ. ಇಲ್ಲಿ ಪ್ರತಿ ಕೆಜಿ ಸೇಬು 70 ರಿಂದ 80 ರೂಪಾಯಿ ಬಿಕರಿಯಾಗುತ್ತಿದೆ. ಆದರೆ, ಅದಕ್ಕಿಂತಲೂ ಹೆಚ್ಚು ದುಬಾರಿಯಾಗಿದೆ ಸೇಬಿನಂತೆ ಕೆಂಪಾಗಿರುವ ಟೊಮೆಟೊ. ಕೆಜಿ ಟೊಮೆಟೊ 90 ರಿಂದ 100 ರೂಪಾಯಿ ಬೆಲೆ ಇದೆ. ಹೀಗಾಗಿ ಹಿಮಪ್ರದೇಶದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಇದು ಇಲ್ಲಿನ ರೈತರಿಗೆ ಲಾಭವೂ ತಂದುಕೊಡುತ್ತಿದೆ.

ಹಿಮಾಚಲ ಪ್ರದೇಶದಲ್ಲಿ ಜುಲೈ ತಿಂಗಳ ಆರಂಭದಿಂದ ಸೇಬಿನ ಸೀಸನ್ ಶುರುವಾಗುತ್ತದೆ. ಆದರೆ, ಅದಕ್ಕೂ ಮೊದಲೇ ಟೊಮೆಟೊ ಭರ್ಜರಿ ಹಣ ತರ್ತಿದೆ. ಆ್ಯಪಲ್ ಹಿಮಾಚಲದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತದೆ. ಆದರೆ, ಈ ಬಾರಿ ಟೊಮೆಟೊ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಬಹುದು. ಮಳೆಯಿಂದಾಗಿ ಈ ಹಂಗಾಮಿನಲ್ಲಿ ಉತ್ಪಾದನೆ ಗಣನೀಯವಾಗಿ ಕುಸಿದಿರುವುದರಿಂದ ಟೊಮೆಟೊ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ.

ಹಂಗಾಮಿನ ಆರಂಭದಲ್ಲಿ ಒಂದು ಕ್ರೇಟ್‌ಗೆ 800ರಿಂದ 900ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೊ ಇಂದು ತರಕಾರಿ ಮಾರುಕಟ್ಟೆಯಲ್ಲಿ 1800ರಿಂದ 2,300ಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷ ಒಂದು ಕ್ರೇಟ್‌ಗೆ 500 ರಿಂದ 1700ವರೆಗೆ ಟೊಮೆಟೊ ಮಾರಾಟವಾಗಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ.

ದೇಶದ ಪ್ರಮುಖ ಮಂಡಿಗಳಾದ ಬೆಂಗಳೂರು, ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ಟೊಮೆಟೊ ಕೊರತೆ ವರದಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಿಮಾಚಲದ ಬೆಟ್ಟದ ಟೊಮೆಟೊ ಈ ದೊಡ್ಡ ಮಂಡಿಗಳ ಬೇಡಿಕೆಯನ್ನು ಪೂರೈಸುತ್ತಿದೆ. ಇಲ್ಲಿ ಪೂರೈಕೆ ಹೆಚ್ಚಿರುವುದರಿಂದ ರೈತರಿಗೆ ಉತ್ತಮ ಬೆಲೆಯೂ ಸಿಗುತ್ತಿದೆ. ಆದರೆ, ಹೆಚ್ಚಿನ ಬೇಡಿಕೆಯಿಂದಾಗಿ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿದೆ.

ಈ ಸೀಸನ್​ನಲ್ಲಿ ಇಲ್ಲಿ ಟೊಮೆಟೊ ಸೀಸನ್ ಚೆನ್ನಾಗಿದೆ ಎನ್ನುತ್ತಾರೆ ಸೋಲನ್ ನ ಸಬ್ಜಿ ಮಂಡಿಯ ಏಜೆಂಟರಾದ ಅರುಣ್ ಪರಿಹಾರ್ ಮತ್ತು ಕಿಶೋರ್ ಕುಮಾರ್. ಮಳೆಯಿಂದಾಗಿ ಬೆಂಗಳೂರಿನ ಟೊಮೆಟೊ ದೇಶದ ದೊಡ್ಡ ದೊಡ್ಡ ಮಂಡಿಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಹಿಮಾಚಲದಿಂದ ಆ ದೊಡ್ಡ ಮಂಡಿಗಳಿಗೆ ಟೊಮೆಟೊ ಪೂರೈಕೆಯಾಗುತ್ತಿದೆ. ಮುಂದಿನ 2 ವಾರಗಳಲ್ಲಿ ರೈತರಿಗೆ ಪ್ರತಿ ಕ್ರೇಟ್‌ಗೆ ₹ 1800 ರಿಂದ ₹ 2300 ವರೆಗೆ ಬೆಲೆ ಸಿಗಲಿದೆ.

ಮತ್ತೊಂದೆಡೆ, ಈ ಬಾರಿ ರೈತರು ಮತ್ತು ತೋಟಗಾರರಿಗೆ ಸೇಬು ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಸೇಬು ಹಂಗಾಮಿನ ಆರಂಭದಲ್ಲಿ ರೈತರಿಗೆ ಪ್ರತಿ ಕೆಜಿ ಸೇಬಿಗೆ ₹ 70 ರಿಂದ ₹ 80 ರೂ ಸಿಗುತ್ತಿದೆ. ಗ್ರೇಡಿಂಗ್ ಪ್ರಕಾರ, ಮಂಡಿಗಳಲ್ಲಿ ಸೇಬುಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಮಳೆಯಿಂದಾಗಿ ಸೇಬು ಉತ್ಪಾದನೆಯೂ ಕುಸಿದಿದೆ.

ಹೀಗಾಗಿ ತೋಟಗಾರರು ಸೇಬಿಗೆ ಉತ್ತಮ ಬೆಲೆ ಕಟ್ಟುತ್ತಿದ್ದಾರೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಸೇಬು ಒಂದು ಬಾಕ್ಸ್‌ಗೆ ₹ 900 ರಿಂದ ₹ 3000 ವರೆಗೆ ಮಾರಾಟವಾಗಿತ್ತು. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಸೇಬುಗಳನ್ನು ಕೆಜಿ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಮೊದಲ ಬಾರಿಗೆ ಸೇಬುಗಳನ್ನು ಅವುಗಳ ತೂಕಕ್ಕೆ ಅನುಗುಣವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ತೋಟಗಾರಿಕೆಯ ರೈತರಿಗೆ ಅನುಕೂಲವಾಗುತ್ತಿದೆ.

ಇದನ್ನೂ ಓದಿ :Tomato price :ಮಹಾನಗರಗಳಲ್ಲಿ ನೂರರ ಗಡಿ ದಾಟಿದ ಟೊಮೆಟೋ ಬೆಲೆ

ABOUT THE AUTHOR

...view details