ತೆಲಂಗಾಣ : ದಿನದಿಂದ ದಿನಕ್ಕೆ ಕುಸಿಯುತ್ತಿರುವ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಲು ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಛಾಯಾಗ್ರಾಹಕರೊಬ್ಬರು ವಿನೂತನ ಉಪಾಯ ಮಾಡಿದ್ದಾರೆ. ಆ ಐಡಿಯಾ ಸೂಪರ್ ಹಿಟ್ ಆಗಿದ್ದು, ಗ್ರಾಹಕರು ಅವರ ಅಂಗಡಿ ಬಳಿ ಸಾಲುಗಟ್ಟಿ ನಿಂತಿದ್ದಾರೆ. ಇದುವರೆಗೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದ ಸ್ಟುಡಿಯೋ, ಈಗ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ. ಅಷ್ಟಕ್ಕೂ ಅವರು ಮಾಡಿದ ಪ್ಲಾನ್ ಏನು ಗೊತ್ತಾ? ಇಲ್ಲಿದೆ ನೋಡಿ.
ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವುದು ಗೊತ್ತೇ ಇದೆ. ಕೆಲವೆಡೆ, ಒಂದು ಕಿಲೋ ಟೊಮೆಟೊ 150 ರಿಂದ 200 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಅನೇಕ ಮಂದಿ ಆಡುಗೆಯಲ್ಲಿ ಟೊಮೆಟೊ ಬಳಕೆಯನ್ನು ಆದಷ್ಟು ಕಡಿಮೆ ಮಾಡುತ್ತಿದ್ದಾರೆ. ಆದರೆ, ಬಹುತೇಕ ಎಲ್ಲ ಖಾದ್ಯಗಳಿಗೂ ಟೊಮೆಟೊ ಬೇಕಾಗಿರುವುದರಿಂದ ಬೆಲೆ ಎಷ್ಟೇ ಇದ್ದರೂ ಕೊಂಡುಕೊಳ್ಳಬೇಕಿದೆ. ಇನ್ನು ಕೆಲವರು ಬೆಲೆ ಏರಿಕೆಯನ್ನು ಮನಗಂಡು ತಮ್ಮ ಹುಟ್ಟುಹಬ್ಬದಂದು ಬಡವರಿಗೆ ಟೊಮೆಟೊ ಉಡುಗೊರೆಯಾಗಿ ಹಂಚಿರುವ ಉದಾಹರಣೆಗಳಿವೆ.
ಇದನ್ನೂ ಓದಿ :ಟೊಮೆಟೊಗೆ ಬಂಪರ್ ಬೆಲೆ.. ಆನಂದದಲ್ಲಿ ತೇಲುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ರೈತರು
ಭದ್ರಾದ್ರಿ ಕೊತಗುಡೆಂ ಪಟ್ಟಣದ ಆನಂದ್ ಎಂಬ ವ್ಯಕ್ತಿ ಕಳೆದ ಕೆಲ ದಿನಗಳಿಂದ ಸ್ಥಳೀಯ ಕಲೆಕ್ಟರೇಟ್ ಬಳಿ ಫೋಟೋ ಸ್ಟುಡಿಯೋ ನಡೆಸುತ್ತಿದ್ದಾರೆ. ಸ್ಥಳೀಯರು ಹಾಗೂ ಕಲೆಕ್ಟರೇಟ್‌ಗೆ ಬರುವ ಜನರಿಂದ ಬ್ಯೂಸಿನೆಸ್ ಉತ್ತಮವಾಗಿ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಕಲೆಕ್ಟರೇಟ್ ಪಲ್ವಂಚಕ್ಕೆ ಸ್ಥಳಾಂತರಗೊಂಡಿದ್ದರಿಂದ ಆನಂದ್ ಫೋಟೋ ಸ್ಟುಡಿಯೋಗೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹಾಗೆಯೇ, ಇತ್ತೀಚೆಗೆ ಸ್ಮಾರ್ಟ್ ಫೋನ್, ಡಿಎಸ್ ಎಲ್ ಆರ್ ಕ್ಯಾಮರಾ ಬಳಕೆ ಅತಿಯಾಗಿರುವುದರಿಂದ ಸ್ಟುಡಿಯೋಗೆ ಬರುವವರ ಸಂಖ್ಯೆಯೂ ವಿರಳ.
ಇದನ್ನೂ ಓದಿ :ನಸುಕಿನಲ್ಲೇ ಜಮೀನಿಗೆ ನುಗ್ಗಿ ಟೊಮೆಟೊ ಕದಿಯುತ್ತಿದ್ದ ಚಾಲಾಕಿ.. ಪ್ಲಾನ್ ಮಾಡಿ ಖದೀಮನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ರೈತ
ಆನಂದ್ ಅವರ ವಿನೂತನ ಕಲ್ಪನೆ ಏನು? : ಟೊಮೆಟೊ ಬೆಲೆ ಗಗನಕ್ಕೇರಿರುವುದನ್ನೇ ಗಮನದಲ್ಲಿಟ್ಟುಕೊಂಡು ಆನಂದ್ ಒಂದು ವಿನೂತನ ಉಪಾಯವನ್ನು ಮಾಡಿದರು. ಇವರ ಅಂಗಡಿಯಲ್ಲಿ 100 ರೂಪಾಯಿ ಖರ್ಚು ಮಾಡಿ ಪಾಸ್ ಪೋರ್ಟ್ ಸೈಜ್ 8 ಫೋಟೋ ತೆಗೆದುಕೊಳ್ಳುವವರಿಗೆ 1/4 ಕೆ ಜಿ ಟೊಮೆಟೊ ಉಚಿತ ಎಂದು ಪಟ್ಟಣದ ಪ್ರಮುಖ ಬೀದಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಫ್ಲೆಕ್ಸ್ ಅಳವಡಿಸಿದ್ದರು. ಫೋಟೋಗ್ರಾಫರ್ ವಿನೂತನ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಆಫರ್ ನೋಡಿ ಬುಧವಾರ ತಮ್ಮ ಅಂಗಡಿಯಲ್ಲಿ ಫೋಟೋ ತೆಗೆದ 32 ಮಂದಿಗೆ 40 ರೂ. ಮೌಲ್ಯದ ಕಾಲು ಕಿಲೋ ಟೊಮೆಟೊ ಉಚಿತವಾಗಿ ನೀಡಲಾಗಿದೆ ಎಂದು ಆನಂದ್ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :Watch.. 11 ಟನ್ ಟೊಮೆಟೊ ತುಂಬಿದ್ದ ಲಾರಿ ಪಲ್ಟಿ : ಕದಿಯಲು ಬಂದ ಜನರಿಗೆ ಕಾದಿತ್ತು ಬಿಗ್ ಶಾಕ್.. ಏನದು ?