ನವದೆಹಲಿ:ದೇಶಾದ್ಯಂತ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೌದು, ದೇಶದ ಕೆಲವು ರಾಜ್ಯಗಳಲ್ಲಂತೂ ಟೊಮೆಟೊ ಬೆಲೆ 150ರಿಂದ 200 ರೂ. ಗಡಿ ಮುಟ್ಟಿದೆ. ಇದರ ಪರಿಣಾಮ ಹೋಟೆಲ್, ರೆಸ್ಟೋರೆಂಟ್ ಮತ್ತು ಢಾಬಾಗಳಿಗೆ ಜೋರಾಗಿಯೇ ತಟ್ಟಿದೆ. ಎಲ್ಲಾ ಹೋಟೆಲ್ಗಳಲ್ಲಿ ಆಹಾರದಿಂದ ಟೊಮೆಟೊಗಳು ಕಣ್ಮರೆಯಾಗುತ್ತವೆ. ಅಡುಗೆ ಭಟ್ಟರು ಲೆಕ್ಕಾಹಾಕಿ ಟೊಮೆಟೊಗಳನ್ನು ಆಹಾರಕ್ಕಾಗಿ ಬಳಕೆ ಮಾಡುತ್ತಿದ್ದಾರೆ.
"ನಾವು ಮೊದಲು 20ರಿಂದ 25 ಕೆಜಿ ಟೊಮೆಟೊ ಬಳಸುತ್ತಿದ್ದೆವು. ಆದರೆ, ಈಗ ನಾವು 5ರಿಂದ 7 ಕೆಜಿ ಟೊಮೆಟೊ ಮಾತ್ರ ಬಳಕೆ ಮಾಡುತ್ತಿದ್ದೇವೆ. ಟೊಮೆಟೊ ತುಂಬಾ ದುಬಾರಿಯಾಗಿದೆ. ನಾವು ನಮ್ಮ ಢಾಬಾದಲ್ಲಿ ಬೆಲೆಗಳನ್ನು ಹೆಚ್ಚಿಸಲು ಸಾಧ್ಯವಿಲ್ಲ. ಭಕ್ಷ್ಯಗಳು ಇಲ್ಲದಿದ್ದರೆ ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತೇವೆ. ನಾವು ಈಗ ಟೊಮೆಟೊ ಬದಲಿಗೆ ಈರುಳ್ಳಿಯನ್ನು ಬಳಸುತ್ತಿದ್ದೇವೆ. ಇದರಿಂದ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ" ಹೇಳುತ್ತಾರೆ ಎಂದು ದೆಹಲಿಯ ಗೌತಮ್ ನಗರದ ಮಾಮಾ ಢಾಬಾದ ಬಾಣಸಿಗ ಸುನಿಲ್ ಕುಮಾರ್ ಯಾದವ್.
ಪೆಟ್ರೋಲಿಗಿಂತಲೂ ದುಬಾರಿಯಾದ ಟೊಮೆಟೊ:ದೇಶದೆಲ್ಲೆಡೆ ಟೊಮೆಟೊ ಬೆಲೆ ಗಗಮುಖಿಯಾಗುತ್ತಿದೆ. ಪೆಟ್ರೋಲ್ ದರಕ್ಕಿಂತಲೂ ಟೊಮೆಟೊ ಬಲು ದುಬಾರಿಯಾಗಿದೆ. ಮಾರುಕಟ್ಟೆಗೆ ಟೊಮೆಟೊ ಆವಕ ತೀರಾ ಇಳಿಕೆಯಾಗಿದೆ. ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಎಲ್ಲ ತರಕಾರಿಗಳಲ್ಲೇ ಟೊಮೆಟೊ ದರ ಉತ್ತುಂಗಕ್ಕೆ ಏರಿಕೆಯಾಗಿದೆ. ಇದರ ಬೆಲೆ ಏರಿಕೆಯಿಂದ ಟೊಮೆಟೊ ಪ್ರಿಯರಿಗೆ ತೀವ್ರ ನಿರಾಶೆ ಉಂಟಾಗಿದೆ. ಮೇ ತಿಂಗಳ ಆರಂಭದಲ್ಲಿ 15 ರೂಪಾಯಿ ಇದ್ದ ಟೊಮೆಟೊ ಸದ್ಯ 150ರಿಂದ 200 ರೂಪಾಯಿವರಿಗೆ ಇದೆ.
ಮೆಕ್ಡೊನಾಲ್ಡ್ನಲ್ಲಿ ಟೊಮೆಟೊ ಬಳಕೆ ಕಡಿಮೆ:ಸದ್ಯದ ಸರದಿ ಮೆಕ್ಡೊನಾಲ್ಡ್ ಪ್ರಿಯರಿಗೂ ಆಗಿದೆ. ಟೊಮೆಟೊ ಲಭ್ಯತೆ ಕೊರತೆಯಾಗಿರುವುದರಿಂದ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಮೆಕ್ಡೊನಾಲ್ಡ್ ಕೇಂದ್ರದಲ್ಲಿ ಟೊಮೆಟೊವನ್ನು ತಮ್ಮ ತಿನಿಸುಗಳಿಗೆ ಬಳಸಲಾಗುತ್ತಿಲ್ಲ. ಇದಕ್ಕೆ ಗ್ರಾಹಕರು ಸಹಕರಿಸಬೇಕು ಎಂದು ಮೆಕ್ಡೊನಾಲ್ಡ್ ಕೇಂದ್ರಗಳು ನೋಟಿಸ್ಗಳನ್ನು ಕೂಡಾ ಅಂಗಡಿ ಎದುರು ಅಂಟಿಸಿವೆ.