ಕೋಲ್ಕತ್ತಾ(ಪಶ್ಚಿಮ ಬಂಗಾಳ):ತಂದೆಯ ಜೊತೆ ಪ್ರಯಾಣ ಮಾಡ್ತಿದ್ದ ಸಂದರ್ಭದಲ್ಲಿ ನಟಿ ಅನನ್ಯ ಗುಹಾ ಕಾರಿನ ಮೇಲೆ ಮರವೊಂದು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಬೆಂಗಾಲಿ ಟಿವಿ ಶೋ 'ಮಿಥಾಯ್' ಶೂಟಿಂಗ್ನಲ್ಲಿ ಭಾಗಿಯಾಗಲು ಬೆಳಗ್ಗೆ ತೆರಳುತ್ತಿದ್ದ ವೇಳೆ, ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋಲ್ಕತ್ತಾದ ಟಾಲಿಗಂಜ್ಗೆ ತೆರಳುತ್ತಿದ್ದ ವೇಳೆ ಎಸ್ಪಿ ಮಖರ್ಜಿ ರಸ್ತೆ ಬಳಿ ಇದ್ದಕ್ಕಿದ್ದಂತೆ ಮರವೊಂದು ನಟಿಯ ಕಾರಿನ ಮೇಲೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ವೇಳೆ, ಸ್ಥಳೀಯರು ನಟಿಯ ರಕ್ಷಣಗೆ ಧಾವಿಸಿ, ಸಹಾಯ ಮಾಡಿದ್ದಾರೆ. ತದನಂತರ ನಟಿ ಅನನ್ಯ ಹಾಗೂ ಆಕೆಯ ತಂದೆ ಬೇರೊಂದು ಕಾರಿನಲ್ಲಿ ಶೂಟಿಂಗ್ ಸ್ಥಳಕ್ಕೆ ತಲುಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ತಪಾಸಣೆ ನಡೆಸಿದರು. ಈ ವೇಳೆ, ಇತ್ತೀಚಿಗೆ ರಾಜ್ಯದಲ್ಲಿ ಬೀಸಿರುವ ಬಿರುಗಾಳಿಯಿಂದ ಮರ ಸಡಿಲಗೊಂಡು ಕಾರಿನ ಮೇಲೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.