ಹೈದರಾಬಾದ್(ತೆಲಂಗಾಣ): ಪ್ರೇಮ ಅಂತಾ ಹೇಳಿ ಜೂನಿಯರ್ ಕಲಾವಿದೆಯನ್ನು ನಂಬಿಸಿ ಗರ್ಭಿಣಿಯನ್ನಾಗಿ ಮಾಡಿದ ಉದಯೋನ್ಮುಖ ನಟನನ್ನು ಜುಬ್ಲಿ ಹಿಲ್ಸ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪೊಲೀಸ್ ವರದಿ ಪ್ರಕಾರ, ವೆಂಕಟಗಿರಿಯಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ವಾಸವಿದ್ದು, ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ (25) ಜುಬಿಲಿ ಹಿಲ್ಸ್ ರಸ್ತೆ ನಂ.45 ರಲ್ಲಿ ವಾಸವಾಗಿದ್ದ ಪ್ರಿಯಾಂತ್ ರಾವ್ (30) ಎಂಬುವರ ಜೊತೆ ಪರಿಚಯವಾಗಿದೆ. ಇವರ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಪ್ರಿಯಾಂತ್ ರಾವ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ. ಕಳೆದ ಜನವರಿಯಲ್ಲಿ ಆಕೆ ಗರ್ಭಿಣಿಯಾಗಿದ್ದರು.
ಈ ವಿಷಯ ತಿಳಿದಾಗ ನಾನು ಪ್ರಿಯಾಂತ್ ಗಮನಕ್ಕೆ ತಂದಾಗ ಗರ್ಭಪಾತದ ಮಾತ್ರೆಗಳನ್ನು ನೀಡಿ ತೆಗೆದುಕೊಳ್ಳುವಂತೆ ಹೇಳಿದನು. ಬಳಿಕ ಆತನಿಗೆ ಮದುವೆಯಾಗಿ ಮಗಳಿದ್ದಾಳೆ ಎಂಬ ಸಂಗತಿ ತಿಳಿದಿತ್ತು. ಇದರ ಬಗ್ಗೆ ಪ್ರಿಯಾಂತ್ನನ್ನು ವಿಚಾರಿಸಿದಾಗ, ಪತ್ನಿಗೆ ವಿಚ್ಛೇದನ ನೀಡುವುದಾಗಿ ಹೇಳಿ ನಂಬಿಸಿದ್ದರಂತೆ.