ನವದೆಹಲಿ:ಟೋಕಿಯೊ ಪ್ಯಾರಾಲಿಂಪಿಕ್ಸ್ ಇಂದು ಸಂಜೆ ಚಾಲನೆ ಸಿಗಲಿದೆ.(ಭಾರತೀಯ ಕಾಲಮಾನ) ಈ ಸಂದರ್ಭದಲ್ಲಿ ಭಾರತೀಯ ಆಟಗಾರರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮುಂತಾದವರು ಸ್ಪರ್ಧಿಗಲಿಗೆ ಶುಭ ಕೋರಿದ್ದಾರೆ. ಟ್ವೀಟ್ ಮಾಡಿರುವ ಕೊಹ್ಲಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಶುಭಕೋರುತ್ತೇನೆ. ನೀವು ದೇಶಕ್ಕೆ ಹೆಮ್ಮೆ ತರುತ್ತೀರಿ ಎಂಬ ಖಾತ್ರಿಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಟ್ವೀಟ್ ಮಾಡಿ, ಈ ಪ್ರತಿಷ್ಟಿತ ಕ್ರೀಡಾಕೂಟ ಪ್ಯಾರಾಲಿಂಪಿಕ್ ಆರಂಭವಾಗುತ್ತಿದೆ. ರಾಷ್ಟ್ರವನ್ನು ಪ್ರತಿನಿಧಿಸಲು ತಯಾರಾಗುತ್ತಿರುವ ಪ್ರತಿಯೊಬ್ಬ ಕ್ರೀಡಾಪಟುವಿಗೆ ನಾನು ಭಾರತೀಯ ಹಾಕಿ ತಂಡದ ಪರವಾಗಿ ಶುಭ ಹಾರೈಸುತ್ತೇನೆ ಎಂದಿದ್ದಾರೆ.