ಪುರಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಸ್ಟಾರ್ ಇಂಡಿಯನ್ ಶಟ್ಲರ್ ಪಿ.ವಿ. ಸಿಂಧು ಅವರನ್ನು ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶೇಷ ಕಲಾಕೃತಿಯ ಮೂಲಕ ಅಭಿನಂದಿಸಿದ್ದಾರೆ.
ಒಡಿಶಾದ ಕಡಲತೀರದಲ್ಲಿ ಮರಳಿನಲ್ಲಿ ಸಿಂಧು ಹಾಗೂ ಅವರ ಕಂಚಿನ ಪದಕವನ್ನು ಹೊಂದಿರುವ ಕಲಾಕೃತಿಯನ್ನು ಪಟ್ನಾಯಕ್ ಅವರುರಚಿಸಿದ್ದಾರೆ. ಅಲ್ಲದೇ, 'ನಿಮ್ಮ ಅದ್ಭುತ ಪ್ರದರ್ಶನದಿಂದ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ' ಎಂದು ಸುದರ್ಶನ್ ಅವರು ಕಲಾಕೃತಿಯಲ್ಲಿ ಬರೆದಿದ್ದಾರೆ.