ಕರ್ನಾಟಕ

karnataka

ETV Bharat / bharat

ಟೋಕಿಯೋ ಒಲಿಂಪಿಕ್ಸ್‌​: ಬಾಕ್ಸರ್‌ ಲವ್ಲಿನಾ ಸಾಧನೆಗೆ ಮರಳು ಕಲೆ ಮೂಲಕ ವಿಶೇಷ ಪ್ರೋತ್ಸಾಹ - Padma Shri awardee Sudarsan Pattnaik

ಪ್ರಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಒಡಿಶಾದ ಪುರಿಯ ಬೀಚ್​ನಲ್ಲಿ ಬಾಕ್ಸರ್‌ ಲವ್ಲಿನಾ ಅವರ ಚಿತ್ರವನ್ನು ಬಿಡಿಸುವ ಮೂಲಕ ಯುವ ಬಾಕ್ಸರ್​ಗೆ ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹಿಸಿದ್ದಾರೆ.

Sudarsan Pattnaik
ಲವ್ಲಿನಾ ಚಿತ್ರವನ್ನು ಬಿಡಿಸಿದ ಸುದರ್ಶನ್ ಪಟ್ನಾಯಕ್

By

Published : Aug 1, 2021, 12:43 PM IST

ಪುರಿ(ಒಡಿಶಾ):ಭಾರತೀಯಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಟೋಕಿಯೊ ಒಲಂಪಿಕ್ಸ್​ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾ ತೈಪೆಯ ಚಿನ್ ಚೆನ್​ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ದೇಶಕ್ಕೆ ಪದಕ ತರುವುದನ್ನು ಖಾತ್ರಿಪಡಿಸಿದ್ದಾರೆ. ಇವರ ಈ ಸಾಧನೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಬೀಚ್‌ನಲ್ಲಿ ಸುಂದರವಾದ ವಿಶೇಷ ಸ್ಯಾಂಡ್​ ಆರ್ಟ್​ ಬಿಡಿಸಿದ್ದಾರೆ.

ಖ್ಯಾತ ಮರಳು ಕಲಾವಿದ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಎಲ್ಲಾ ಆಟಗಾರರಿಗೆ ಶುಭಾಶಯ ತಿಳಿಸಿ, ಮರಳು ಕಲೆ ರಚಿಸಿದ್ದರು.

ಪಟ್ನಾಯಕ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಳು ಕಲಾವಿದ. ದೇಶಕ್ಕೆ ಸಂಬಂಧಿಸಿದಂತೆ, ಗಣ್ಯರ ಸಾಧನೆ, ಹಬ್ಬ ಸೇರಿ ಅನೇಕ ವಿಷಯಗಳ ಮೇಲೆ ಮರಳಿನ ಕಲೆಯನ್ನು ರಚಿಸುವಲ್ಲಿ ಇವರು ಹೆಸರುವಾಸಿ.

ABOUT THE AUTHOR

...view details