ಟೋಕಿಯೊ: ವಿಶ್ವ ದಾಖಲೆ ಮುರಿದು ಮುನ್ನುಗ್ಗಿದ ಆಸ್ಟ್ರೇಲಿಯಾ ಈಜುಪಟುಗಳು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 4x100 ಮೀಟರ್ ರಿಲೇಯಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದರ ಜೊತೆಗೆ ಮಹಿಳಾ ಈಜುಗಾರ್ತಿ ಎಮ್ಮಾ ಮೆಕಿಯಾನ್ ಶಿಖರ ಸದೃಶ ಸಾಧನೆ ತೋರಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: 27 ವರ್ಷದ ಆಸ್ಟ್ರೇಲಿಯಾ ಮಹಿಳಾ ಅಥ್ಲೀಟ್ ಕೊರಳಿಗೆ 7 ಪದಕಗಳ ಮಾಲೆ! - ಮಹಿಳೆಯರ 4x100 ಮೀಟರ್ ರಿಲೇ
27 ವರ್ಷದ ಆಸ್ಟ್ರೇಲಿಯಾದ ಈಜುಪಟು ಎಮ್ಮಾ ಮೆಕಿಯಾನ್ ನಾಲ್ಕು ಚಿನ್ನ ಹಾಗು ಮೂರು ಕಂಚು ಸೇರಿದಂತೆ ಒಟ್ಟು 7 ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡು ಒಲಿಂಪಿಕ್ಸ್‌ನಲ್ಲಿ ಅತೀ ಹೆಚ್ಚು ಪದಕಗಳನ್ನು ಗೆದ್ದ ಮಹಿಳಾ ಸ್ಪರ್ಧಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ರಿಲೇ ಓಟದಲ್ಲಿ ಆಸ್ಟ್ರೇಲಿಯಾದ ಕೇಲೀ ಮೆಕ್‌ಕೌನ್, ಚೆಲ್ಸಿಯಾ ಹಾಡ್ಜಸ್, ಎಮ್ಮಾ ಮೆಕಿಯಾನ್, ಕೇಟ್ ಕ್ಯಾಂಪ್‌ಬೆಲ್ ಅವರು ಹೊಸ ದಾಖಲೆ ನಿರ್ಮಿಸಿದರು. 3 ನಿಮಿಷ 51.60 ಸೆಕೆಂಡ್ಗೆ ಇವರು ತಮ್ಮ ಗುರಿ ಮುಟ್ಟಿ ಗೆಲುವಿನ ನಗೆ ಬೀರಿದರು. ಸ್ಪರ್ಧೆಯಲ್ಲಿ ಯುಎಸ್ಎ 3 ನಿಮಿಷ 51.73 ಸೆಕೆಂಡ್ ತೆಗೆದುಕೊಂಡು ಎರಡನೇ ಸ್ಥಾನ ಪಡೆಯಿತು. ಕೆನಡಾ 3 ನಿಮಿಷ 52.60 ಸೆಕೆಂಡ್ನಲ್ಲಿ ಆಟ ಮುಗಿಸಿ ಕಂಚಿನ ಪದಕ ಪಡೆಯಿತು.
ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ 27 ವರ್ಷದ ಎಮ್ಮಾ ಮೆಕಿಯಾನ್ ಅವರು ಈ ವರೆಗೆ ಮೂರು ಕಂಚು ಮತ್ತು ನಾಲ್ಕು ಚಿನ್ನ ಸೇರಿದಂತೆ ಒಟ್ಟು 7 ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಅತೀ ಹೆಚ್ಚು ಪದಕಗಳನ್ನು ಗೆದ್ದ ಮಹಿಳಾ ಸ್ಪರ್ಧಿ ಎಂಬ ದಾಖಲೆ ಬರೆದರು.