ಕರ್ನಾಟಕ

karnataka

ETV Bharat / bharat

Tokyo Olympics ​: ರೂಪಿಂದರ್‌ ಪಾಲ್ ಮಿಂಚಿನ ಆಟ..ಸ್ಪೇನ್​ ವಿರುದ್ಧ ಭಾರತ ಹಾಕಿ ತಂಡಕ್ಕೆ ಜಯ - Tokyo Olympics Hockey team

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪೇನ್​ ವಿರುದ್ಧ ಭಾರತ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ. ರೂಪಿಂದರ್‌ ಪಾಲ್ ಸಿಂಗ್ ಮತ್ತು ಸಿಮ್ರಾಂಜಿತ್ ಸಿಂಗ್ ಉತ್ತಮ ಪ್ರದರ್ಶನ ನೀಡಿದ್ದಾರೆ.

Hockey
ಭಾರತದ ಹಾಕಿ ತಂಡ

By

Published : Jul 27, 2021, 8:32 AM IST

Updated : Jul 27, 2021, 8:38 AM IST

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಡೆದ 'ಎ' ಗುಂಪಿನ ಹಾಕಿ ಪಂದ್ಯದಲ್ಲಿ ಸ್ಪೇನ್​ ವಿರುದ್ಧ ಭಾರತ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ. ರೂಪಿಂದರ್‌ ಪಾಲ್ ಸಿಂಗ್ ಮತ್ತು ಸಿಮ್ರಾಂಜಿತ್ ಸಿಂಗ್ ಅವರ ಅದ್ಭುತ ಪ್ರದರ್ಶನವೇ ಈ ಗೆಲುವಿಗೆ ಕಾರಣವಾಗಿದೆ.

ಮಿಡ್‌ ಫೀಲ್ಡರ್ ಸಿಮ್ರಾಂಜಿತ್ 13ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಬಳಿಕ 15ನೇ ನಿಮಿಷದಲ್ಲಿ ರೂಪಿಂದರ್‌ ಪಾಲ್​ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಎರಡನೇ ಗೋಲು ಬಾರಿಸಿದರು. 51ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆಯುವ ಮೂಲಕ ಸುಲಭವಾಗಿ ಗೆಲುವು ದಾಖಲಿಸಿತು.

ಇದನ್ನು ಓದಿ: Tokyo Olympics: 10 ಮೀ ಏರ್ ರೈಫಲ್​​​ ಮಿಶ್ರ ಆವೃತ್ತಿಯಿಂದ ಹೊರಬಿದ್ದ ಚೌಧರಿ-ಭಾಕರ್​

ಇದಕ್ಕೂ ಮೊದಲು, ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ಅಂತರದಿಂದ ಭಾರತ ಜಯಗಳಿಸಿತ್ತು. ನಂತರ ಎರಡನೇ ಪಂದ್ಯದಲ್ಲಿ ವಿಶ್ವ ನಂ. 1 ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ 1-7 ಅಂತರದಿಂದ ಸೋಲನುಭವಿಸಿತ್ತು.

Last Updated : Jul 27, 2021, 8:38 AM IST

ABOUT THE AUTHOR

...view details