ಹಿಂದೂ ಪುರಾಣ ಸಂಸ್ಕೃತಿಯಲ್ಲಿ ಪಂಚಾಂಗವೇ ಎಲ್ಲವನ್ನೂ ಸೂಕ್ತವಾಗಿ ತಿಳಿಸುವ ಕ್ಯಾಲೆಂಡರ್. ಪಂಚಾಂಗವನ್ನು ತಿಳಿದು ಕಾರ್ಯ ಆರಂಭಿಸಿದರೆ ಆ ಕಾರ್ಯ ಸಿದ್ಧಿಯಾಗುತ್ತದೆ. ಪಂಚಾಂಗ ಎಂಬುದು ಪ್ರತಿ ದಿನವೂ ಬದಲಾಗುವ ಸಮಯದ ಐದು ಅಂಗಗಳನ್ನು ತಿಳಿಸುವ ಹಿಂದೂ ಕ್ಯಾಲೆಂಡರ್. ತಿಥಿ, ವಾರ, ನಕ್ಷತ್ರ, ಯೋಗ, ಮತ್ತು ಕರಣಗಳು ಇವೇ ಆ ಐದು ಅಂಗಗಳು.
ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದೆ ಪಂಚಾಂಗ. ಪಂಚಾಂಗವು ಶುಭ ಕಾಲಗಳು, ರಾಹುಕಾಲ, ಉತ್ಸವ, ಗೃಹಣ ಸಮಯ, ತಿಥಿ, ನಕ್ಷತ್ರ, ಋತು ಸೇರಿ ಇನ್ನಿತರ ಮಾಹಿತಿಯನ್ನು ಒಳಗೊಂಡಿರುತ್ತದೆ. ಸೂರ್ಯೋದಯ, ಸೂರ್ಯಾಸ್ತ ಸಮಯ, ಶುಭ ಮುಹೂರ್ತ, ರಾಹುಕಾಲ, ತಿಥಿ, ನಕ್ಷತ್ರ, ಸೂರ್ಯ - ಚಂದ್ರ ಸ್ಥಾನ, ಹಿಂದೂ ತಿಂಗಳು ಮತ್ತು ಪಕ್ಷದ ಮಾಹಿತಿಯನ್ನು ದೈನಂದಿನ ಪಂಚಾಂಗದಿಂದ ತಿಳಿದುಕೊಳ್ಳಬಹುದು. ಇಂದಿನ ಪಂಚಾಂಗದಲ್ಲಿ ಏನಿದೆ ಎಂಬುದರ ಮಾಹಿತಿ ಈ ಕೆಳಗಿನಂತಿದೆ.