ಕರ್ನಾಟಕ

karnataka

ETV Bharat / bharat

ದೇವರ ಆಶೀರ್ವಾದ ಈ ರಾಶಿಯವರಿಗೆ ಯಶಸ್ಸಿಗೆ ನೆರವಾಗುತ್ತದೆ.. ಇಲ್ಲಿದೆ ನೋಡಿ ನಿಮ್ಮ ರಾಶಿಭವಿಷ್ಯ

ಈ ದಿನ ಈ ರಾಶಿಯವರಿಗೆ ಸೌಂದರ್ಯವರ್ಧನೆಯ ದಿನವಾಗಿದೆ ಹಾಗೆ ಮತ್ತೊಂದು ರಾಶಿಯವರ ಜೀವನದಲ್ಲಿ ಸುತ್ತಲಿನ ಜನ ನಿಮ್ಮನ್ನು ನಾಯಕತ್ವದ ಮತ್ತು ಎಲ್ಲರನ್ನೂ ನಿರ್ದೇಶಿಸುವ ವ್ಯಕ್ತಿಯಾಗಿ ಪರಿಗಣಿಸುತ್ತಾರೆ.

today horoscope
today horoscope

By

Published : Jul 23, 2022, 5:12 AM IST

ಮೇಷ: ಸ್ವಾತಂತ್ರ್ಯವನ್ನು ನೀವು ಮಾಡುವ ಪ್ರತಿ ಕೆಲಸದಲ್ಲಿಯೂ ಬಯಸುತ್ತೀರಿ. ನಿಮ್ಮ ಈ ದಿನ ವಿವಿಧ ಬಗೆಯ ಕೌಟುಂಬಿಕ ವ್ಯವಹಾರಗಳಲ್ಲಿ ತುಂಬಿರುತ್ತದೆ. ಹದಿವಯಸ್ಕರು ಅವರ ದಿನವನ್ನು ಶಾಪಿಂಗ್ ಹೋಗುವ ಅಥವಾ ಚಲನಚಿತ್ರ ವೀಕ್ಷಿಸುವ ಮೂಲಕ ಕಳೆಯುತ್ತಾರೆ, ಸಣ್ಣ ಮಕ್ಕಳು ನಿಮ್ಮಿಂದ ತಿಂಡಿ ಕೊಡಿಸಿಕೊಳ್ಳಲು ರಚ್ಚೆ ಹಿಡಿಯಬಹುದು.

ವೃಷಭ:ಈ ದಿನ ಸೌಂದರ್ಯವರ್ಧನೆಯ ದಿನವಾಗಿದೆ. ನಿಮ್ಮ ನೋಟ ಹಾಗೂ ಅಂದ ಹೆಚ್ಚಿಸಿಕೊಳ್ಳುವ ದಾರಿಗಳ ಕುರಿತು ನೀವು ಬಹಳ ತಲೆ ಕೆಡಿಸಿಕೊಳ್ಳುತ್ತೀರಿ. ಹೊಸ, ಸ್ಟೈಲಿಷ್ ಕೂದಲು, ಫೇಸ್ ಪ್ಯಾಕ್ ಗಳು ಮತ್ತು ಮಸಾಜ್ ಗಳು, ಟ್ರೆಂಡಿ ದಿರಿಸುಗಳು ಮತ್ತು ಅಕ್ಸೆಸರಿಗಳು ನಿಮಗಾಗಿ ಕಾದಿವೆ. ಇತರರು ನಿಮ್ಮನ್ನು ಗಮನಿಸುವಂತೆ ಮಾಡಲು ನಿಮಗರಿವಿಲ್ಲದೆ ನೀವು ಮಾಡುವ ಎಲ್ಲವನ್ನೂ ಮಾಡುತ್ತೀರಿ. ನಿಮ್ಮ ಪ್ರಯತ್ನಗಳಿಗೆ ತಕ್ಕಷ್ಟು ಗಮನ ಮತ್ತು ಆಸಕ್ತಿ ನಿಮಗೆ ದೊರೆಯುತ್ತದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ.

ಮಿಥುನ:ನಿಮ್ಮ ಸಾಮಾಜಿಕ ವೃತ್ತದ ಜನರು ನಿಮ್ಮನ್ನು ನಾಯಕತ್ವದ ಮತ್ತು ಎಲ್ಲರನ್ನೂ ನಿರ್ದೇಶಿಸುವ ವ್ಯಕ್ತಿಯಾಗಿ ಕಾಣುತ್ತಾರೆ. ನಿಮಗೆ ನಿಮ್ಮ ಹೃದಯ ಏನನ್ನು ಬಯಸುತ್ತದೋ ಅದನ್ನು ಪಡೆಯುವಲ್ಲಿ ನೀವು ಗಮನ ನೀಡಿರಬಹುದು. ಕೆಲ ಕಾಲದಿಂದ ಉತ್ತರ ದೊರೆಯದೆ ಉಳಿದ ಅನುಮಾನಗಳಿಗೆ ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನೀವು ಯಶಸ್ವಿಯಾಗಬಹುದು.

ಕರ್ಕಾಟಕ: ದೇವರ ಆಶೀರ್ವಾದ ನಿಮಗೆ ಇಂದು ಯಶಸ್ಸು ಗಳಿಸಲು ನೆರವಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅವರ ಪೂರ್ಣಗೊಳ್ಳದ ಕಾರ್ಯಗಳನ್ನು ಮುಗಿಸಿ ಇತರರಿಗಿಂತ ಉತ್ತಮ ಸಾಧನೆ ಮಾಡಲು ಸುವರ್ಣ ಸಮಯವಾಗಿದೆ. ಕಲ್ಪನಾಶಕ್ತಿ ಕಾಡಿನ ಬೆಂಕಿಯಂತೆ ನಿಮ್ಮಲ್ಲಿ ಉರಿಯುತ್ತಿದೆ ಮತ್ತು ಇಂದು ಎಲ್ಲವೂ ನಿಮ್ಮ ದಾರಿಯಲ್ಲಿ ಮುನ್ನಡೆಯುವಂತೆ ಕಾಣುತ್ತಿವೆ.

ಸಿಂಹ:ಒಂದು ಸವಾಲಿನ ದಿನ ನಿಮಗಾಗಿ ಕಾದಿದೆ. ನೀವು ಕೆಲ ಆತಂಕಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತೀರಿ; ಆದರೆ ನಿಮ್ಮ ಎಲ್ಲ ಕೆಲಸಗಳನ್ನೂ ನೀವು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದರ್ಥವಲ್ಲ. ಆದರೆ ನಿಮ್ಮ ಕೆಲಸದ ದೃಷ್ಟಿಯಿಂದ ನಿರೀಕ್ಷೆಗಳು ಹೆಚ್ಚಾಗುತ್ತವೆ. ನೀವು ನಿಮ್ಮ ಮನೆ ಹಾಗೂ ಉದ್ಯೋಗದ ಸ್ಥಳದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ.

ಕನ್ಯಾ:ಇಂದು ನೀವು ತೊಡಗಿಕೊಳ್ಳುವ ಯಾವುದೇ ಕೆಲಸದಲ್ಲೂ ಗಮನಾರ್ಹವಾದ ಸಾಧನೆ ಮಾಡುತ್ತೀರಿ. ವಿದೇಶದಲ್ಲಿ ವ್ಯಾಪಾರೋದ್ಯಮ ಪ್ರಾರಂಭಿಸುವ ನಿಮ್ಮ ಬಯಕೆ ಫಲ ನೀಡುತ್ತದೆ. ನಿಮ್ಮ ಸ್ವಂತ ಇಮೇಜ್ ಅನ್ನು ಗಮನಾರ್ಹವಾಗಿ ಉತ್ತಮಪಡಿಸಲು ನಿಮ್ಮ ವೈಯಕ್ತಿಕ ನೋಟದಲ್ಲಿ ಅಗತ್ಯವಾದ ಸುಧಾರಣೆಗಳನ್ನು ಮಾಡುವುದು ಅಗತ್ಯ.

ತುಲಾ:ಯಾವುದೇ ಹೊಸ ಕೆಲಸ ಪ್ರಾರಂಭಿಸಲು ಇಂದು ಪವಿತ್ರ ದಿನವಾಗಿದೆ. ಕಚೇರಿಯಲ್ಲಿ ನೀವು ಹೊಸ ಸ್ಥಾನಗಳನ್ನು ಪಡೆಯುತ್ತೀರಿ, ಮತ್ತು ಅದರಲ್ಲಿ ಉನ್ನತ ಸಾಧನೆ ಮಾಡುತ್ತೀರಿ. ನೀವು ಕೈಗೊಂಡ ಯಾವುದೇ ಕೆಲಸದಲ್ಲಿಯೂ ನೀವು ಯಶಸ್ಸು ಪಡೆಯುತ್ತೀರಿ. ಇಂದು ನಿಮಗೆ ಅದೃಷ್ಟದ ದಿನವಾಗಿದೆ.

ವೃಶ್ಚಿಕ:ನಿಮ್ಮ ಹೊಸ ವ್ಯಾಪಾರೋದ್ಯಮ ನಿಮ್ಮನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಸಾಧ್ಯತೆ ಇದೆ. ನೀವು ಕೆಲಸದಲ್ಲಿ ನಿರೀಕ್ಷೆಗಳನ್ನು ತಲುಪಲು ನಿಮ್ಮ ವೈಯಕ್ತಿಕ ಜೀವನ ನಿರ್ಲಕ್ಷಿಸುತ್ತೀರಿ. ಯೋಜಿಸಿದಂತೆ ವಿಷಯಗಳು ನಡೆಯದೇ ಇರುವುದರಿಂದ ನಿರಾಶೆಯ ಭಾವನೆ ಮೂಡುತ್ತದೆ, ಮತ್ತು ನಿಮ್ಮ ಪ್ರಯತ್ನಗಳು ವ್ಯರ್ಥವಾಗುವ ಸಾಧ್ಯತೆ ಇದೆ.

ಧನು:ನಿಮ್ಮ ಸುತ್ತಲೂ ಇರುವ ಪರೋಪಕಾರಿಗಳು ಅಪೇಕ್ಷಿಸದ, ಆದರೆ ಮೌಲ್ಯಯುತ ಸಲಹೆ ನೀಡಬಹುದು. ಅದನ್ನು ಸೂಚನೆಯನ್ನಾಗಿ ತೆಗೆದುಕೊಳ್ಳಿ, ಮತ್ತು ಅದನ್ನು ನಿಮ್ಮ ಸುಧಾರಣೆಗೆ ಬಳಸಿಕೊಳ್ಳಿ. ಸಲಹೆ ಅನುಸರಿಸಿದ ನಂತರ ನಿಮ್ಮ ತೀರ್ಮಾನ ಕೈಗೊಳ್ಳಿರಿ, ಮತ್ತು ಇದು ಅನುಮಾನವಿಲ್ಲದೆ ಅನುಕೂಲಗಳನ್ನು ತಂದುಕೊಡುತ್ತದೆ.

ಮಕರ:ನೀವು ನಿಮ್ಮ ಜ್ಞಾನವನ್ನು ವಿದೇಶಗಳಲ್ಲಿ ಆವಿಷ್ಕರಿಸುವ ಮೂಲಕ ವಿಸ್ತರಿಸಲು ಬಯಸಿದ್ದೀರಿ, ಆದರೆ ಅದೃಷ್ಟ ನಿಮಗೆ ಇನ್ನೂ ಪೂರಕವಾಗಿಲ್ಲ. ನಿಮಗೆ ಉನ್ನತ ಶಿಕ್ಷಣಗಳಿಗೆ ಮತ್ತೆ ಪ್ರಯತ್ನ ನಡೆಸಲು ಅತ್ಯಂತ ಅನುಕೂಲಕರ ದಿನವಾಗಿದೆ. ಷೇರು ಮಾರುಕಟ್ಟೆಯೊಂದಿಗೆ ಅಥವಾ ಊಹಾತ್ಮಕ ಶಕ್ತಿಯಿದ್ದರೆ ನೀವು ಲಾಭಗಳನ್ನು ಪಡೆಯುವ ಸಾಧ್ಯತೆ ಇದೆ. ನಿಮಗೆ ಹಲವು ಅವಕಾಶಗಳು ಕಾಣುತ್ತವೆ, ಆದರೆ ನೀವು ಅವುಗಳನ್ನು ಪೂರ್ಣವಾಗಿ ಗುರುತಿಸಿ ಬಳಸಿಕೊಳ್ಳಬೇಕು.

ಕುಂಭ:ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನಿಮಗೆ ಇದು ಚೆನ್ನಾಗಿ ಗೊತ್ತಿದೆ ಮತ್ತು ನಿಮಗೆ ಬೇಕೆನಿಸಿದ್ದನ್ನು ಪಡೆಯಲು ಶ್ರಮವಹಿಸಿ. ಸಹೋದ್ಯೋಗಿಗಳು, ಮಿತ್ರರು ಮತ್ತು ಕುಟುಂಬ-ಎಲ್ಲರೂ ನಿಮ್ಮ ಪ್ರಯತ್ನಗಳು ಮತ್ತು ಸಾಧನೆಗಳನ್ನು ಗುರುತಿಸಿ ಮೆಚ್ಚಿಕೊಳ್ಳುತ್ತಾರೆ. ನೀವು ಅದರ ಕುರಿತು ಆಸಕ್ತಿ ಹೊಂದಿಲ್ಲದಿದ್ದರೂ, ನೀವು ನಿಮ್ಮ ಜೀವನದಲ್ಲಿ ಬಯಸಿದ ಬದಲಾವಣೆ ತರಲು ಕೆಲ ರಿಸ್ಕ್ ಗಳನ್ನು ತೆಗೆದುಕೊಳ್ಳಲೇಬೇಕು.

ಮೀನ:ನಿಮ್ಮ ದಿನ ಇಂದು ವಿಭಿನ್ನ ಲಿಂಗದವರೊಂದಿಗೆ ಸಂವಹನ ನಡೆಸುವುದರೊಂದಿಗೆ ಪ್ರಾರಂಭವಾಗುತ್ತದೆ. ಭಿನ್ನಲಿಂಗಿಗಳೊಂದಿಗೆ ಮಿತ್ರತ್ವ ಪಡೆದುಕೊಳ್ಳಲು ಕೂಡಾ ಇದು ಒಳ್ಳೆಯ ದಿನವಾಗಿದೆ. ಪ್ರೀತಿಯಲ್ಲಿರುವವರಿಗೆ, ಇಂದು ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಉತ್ತಮ ದಿನ. ಪ್ರೀತಿಯ ನಿರೀಕ್ಷೆಯಲ್ಲಿರುವವರು, ನೀವು ಬಹಳ ಕಾಲದಿಂದ ಗುಪ್ತವಾಗಿ ಇಷ್ಟಪಡುತ್ತಿದ್ದ ವಿಶೇಷ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳಲು ಇದು ಸೂಕ್ತ ಕಾಲ.

For All Latest Updates

ABOUT THE AUTHOR

...view details