ಮೇಷ: ಹಳೆಯ, ಆತ್ಮೀಯ ನೆನಪುಗಳು ಇಂದು ನಿಮ್ಮ ಮನಸ್ಥಿತಿಯನ್ನು ನಿರ್ಧರಿಸುತ್ತವೆ, ಅವು ನೀವು ಕೆಲಸದೊಂದಿಗೆ ಹೇಗೆ ವ್ಯವಹರಿಸುತ್ತೀರಿ ಎಂದು ತೋರುತ್ತವೆ, ಅವು ಇತರರಿಗೆ ನಿಮ್ಮ ಮಧುರವಾದ ಭಾಗವನ್ನು ಇತರರಿಗೆ ಕಾಣುವಂತೆ ಮಾಡುತ್ತವೆ. ನೀವು ಹಣದೊಂದಿಗೆ ಜಾಗರೂಕತೆ ವಹಿಸುತ್ತೀರಿ ಮತ್ತು ಅದನ್ನು ಉಳಿಸುವ ಕುರಿತು ಪ್ರಯತ್ನಿಸುತ್ತೀರಿ.
ವೃಷಭ: ಇಂದು ನೀವು ಅತಿಯಾದ ಆಕ್ರಮಣಶೀಲತೆ, ಪ್ರಾಬಲ್ಯದಿಂದ ವರ್ತಿಸುತ್ತೀರಿ. ನಿಮ್ಮ ಆಕ್ರಮಣಶೀಲತೆಯನ್ನು ನಿಯಂತ್ರಿಸುವುದು ಅಗತ್ಯ. ಹೊಸ ಉದ್ಯಮಗಳು ಮತ್ತು ಜವಾಬ್ದಾರಿಗಳಿಗೆ ಇದು ಸೂಕ್ತವಾದ ದಿನವಲ್ಲ. ಆದ್ದರಿಂದ ಯಾವುದೇ ಹೊಸದನ್ನು ಪ್ರಯತ್ನಿಸದಿರಿ. ಸ್ನೇಹಪರವಾಗಿ ಮಾತನಾಡಿ.
ಮಿಥುನ: ನಿಮ್ಮ ಆಕ್ರಮಣಕಾರಿ ಸ್ವಭಾವದಿಂದ ನೀವು ಜನರೊಂದಿಗೆ ವಾದವಿವಾದದಲ್ಲಿ ಸಿಲುಕಿಕೊಳ್ಳುತ್ತೀರಿ. ಈ ಜನರು ನಿಮ್ಮ ಶತೃತ್ವದಿಂದಾಗಿ ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರುತ್ತಾರೆ. ಆದಾಗ್ಯೂ, ನೀವು ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೀರಿ. ಅವರು ನಿಮ್ಮ ಬೌದ್ಧಿಕ ಔನ್ನತ್ಯದಿಂದ ಕೈ ಚೆಲ್ಲಬೇಕಾಗುತ್ತದೆ. ಎಚ್ಚರದಿಂದಿರಿ.
ಕರ್ಕಾಟಕ: ಇಂದು ಅದೃಷ್ಟದೇವತೆ ನಿಮ್ಮ ಕಡೆಗಿರುವಂತೆ ಕಾಣುತ್ತಿದೆ. ಸ್ಥಿರಾಸ್ತಿಗಳ ಮೇಲೆ ನಿಮ್ಮ ಹೂಡಿಕೆಗಳಿಗೆ ಅಪಾರ ಪ್ರತಿಫಲ ಪಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ, ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ನಿರೀಕ್ಷಿಸಬಹುದು. ಇಂದು ನಿಮ್ಮ ಎಲ್ಲ ಪ್ರಯತ್ನಗಳಿಗೂ ಪ್ರತಿಫಲ ಪಡೆಯುವ ದಿನವಾಗುವ ಸಾಧ್ಯತೆ ಇದೆ.
ಸಿಂಹ: ನೀವು ಏನೋ ಒಂದು ವಿಭಿನ್ನವಾದುದನ್ನು ಮಾಡುವ ಬಯಕೆ ಹೊಂದಿರುವಂತೆ ಭಾವಿಸುತ್ತೀರಿ. ಸಂತೋಷದ ಮನಸ್ಥಿತಿ ಇಡೀ ದಿನ ನಿಮ್ಮ ಜೊತೆಯಲ್ಲಿರುತ್ತದೆ. ತಾರೆಗಳು ನಿಮಗೆ ಪೂರಕವಾಗಿರುವುದರಿಂದ ನೀವು ಹಾಕುವ ಶಕ್ತಿಗೆ ಅನುಗುಣವಾಗಿ ನೀವು ಎಲ್ಲ ಸವಾಲುಗಳನ್ನೂ ಎದುರಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.
ಕನ್ಯಾ:ಹಣಕಾಸಿನ ವಿಷಯದಲ್ಲಿ ನೀವು ಕೆಲ ಅಡೆತಡೆಗಳನ್ನು ಎದುರಿಸಬಹುದು. ನಿಮ್ಮ ಹೃದಯವನ್ನಲ್ಲ, ಮನಸ್ಸಿಗೆ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ನೀಡಿ. ನಿಮ್ಮ ಬೆಲೆಬಾಳುವ ಸ್ವತ್ತುಗಳ ಕುರಿತು ಜಾಗರೂಕರಾಗಿರಿ. ಹೊಸ ಯೋಜನೆಗಳು ಮತ್ತು ಕಾನೂನು ಕರ್ತವ್ಯಗಳ ಕುರಿತು ಮಾತನಾಡುವಾಗ, ನೀವು ಏನು ಮಾಡಲು ನಿರ್ಧರಿಸಿದ್ದೀರಿ ಎಂದು ತಿಳಿದಿರಿ ಏಕೆಂದರೆ ಅದು ನಿಮ್ಮ ಮೇಲೆ ಸುದೀರ್ಘ ಪರಿಣಾಮ ಬೀರಬಹುದು.