ಕರ್ನಾಟಕ

karnataka

ETV Bharat / bharat

ನಂದಿಗ್ರಾಮ್​ನಲ್ಲಿ ಸಮೀಕ್ಷೆ: ಸಜ್ಜಾದ ತೃಣಮೂಲ ಕಾಂಗ್ರೆಸ್​​ನ ಹಿರಿಯ ಮುಖಂಡ - Minister and senior Trinamool Congress leader Subrata Mukherjee

ತೃಣಮೂಲ ಕಾಂಗ್ರೆಸ್​​ನ ಹಿರಿಯ ಮುಖಂಡ ಸುಬ್ರತಾ ಮುಖರ್ಜಿ ಫೆ.1 ರಿಂದ ಪೂರ್ವ ಮಿಡ್ನಾಪೋರ್ ಜಿಲ್ಲೆಯ ನಂದಿಗ್ರಾಮ್​ನಲ್ಲಿ ಸಮೀಕ್ಷೆ ನಡೆಸಲು ಸಜ್ಜಾಗಿದ್ದಾರೆ. ಮೂರು ದಿನಗಳ ಕಾಲ ಬೂತ್-ಟು-ಬೂತ್ ಸಮೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತೃಣಮೂಲ ಕಾಂಗ್ರೆಸ್​​ನ ಹಿರಿಯ ಮುಖಂಡ
ತೃಣಮೂಲ ಕಾಂಗ್ರೆಸ್​​ನ ಹಿರಿಯ ಮುಖಂಡ

By

Published : Jan 28, 2021, 8:35 AM IST

ಕೋಲ್ಕತಾ: ಪಶ್ಚಿಮ ಬಂಗಾಳದ ಪಂಚಾಯತ್​​​ ವ್ಯವಹಾರಗಳ ಸಚಿವ ಮತ್ತು ತೃಣಮೂಲ ಕಾಂಗ್ರೆಸ್​​ನ ಹಿರಿಯ ಮುಖಂಡ ಸುಬ್ರತಾ ಮುಖರ್ಜಿ ಫೆ.1 ರಿಂದ ಪೂರ್ವ ಮಿಡ್ನಾಪೋರ್ ಜಿಲ್ಲೆಯ ನಂದಿಗ್ರಾಮ್​ನಲ್ಲಿ ಸಮೀಕ್ಷೆ ನಡೆಸಲು ಸಜ್ಜಾಗಿದ್ದಾರೆ.

ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮ್​ನಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ಹಿನ್ನೆಲೆ, ಮೂರು ದಿನಗಳ ಕಾಲ ಬೂತ್ - ಟು-ಬೂತ್ ಸಮೀಕ್ಷೆಯನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಓದಿ:ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರ: ಮೇಧಾ ಪಾಟ್ಕರ್​, ಯೋಗೇಂದ್ರ ಯಾದವ್​ ಸೇರಿ 37 ಮಂದಿ ವಿರುದ್ಧ FIR

ಕಳೆದ ತಿಂಗಳು ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಡೆದ ಮೆಗಾ ರ‍್ಯಾಲಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿಕೊಂಡ ಮಾಜಿ ಪಶ್ಚಿಮ ಬಂಗಾಳ ಸಾರಿಗೆ ಸಚಿವ ಸುವೇಂದು ಅಧಿಕಾರಿ ಅವರ ಭದ್ರಕೋಟೆ ನಂದಿಗ್ರಾಮ್ ಆಗಿದೆ.

ಮೂಲಗಳ ಪ್ರಕಾರ, ಮುಖರ್ಜಿ ಅವರು ಉನ್ನತ ಕ್ಷೇತ್ರದ ವೈಯಕ್ತಿಕ ಮತದಾರರನ್ನು ಭೇಟಿ ಮಾಡಿ ಮತದಾರರ ಬೇಡಿಕೆಯನ್ನು ಅರ್ಥಮಾಡಿಕೊಳ್ಳಲಿದ್ದಾರೆ. ತೃಣಮೂಲದ ಮುಖ್ಯಸ್ಥರು ನಂದಿಗ್ರಾಮ್‌ನಿಂದ ಚುನಾವಣೆಯಲ್ಲಿ ಸ್ಫರ್ಧಿಸಲು ನಿರ್ಧರಿಸಿದ ನಂತರ ಈ ಹೋರಾಟವು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ತೃಣಮೂಲ ರಾಜ್ಯ ಅಧ್ಯಕ್ಷ ಸುಬ್ರತಾ ಬಕ್ಷಿ ಅವರು ನಂದಿಗ್ರಾಮ್ ಕ್ಷೇತ್ರದಿಂದ ಬ್ಯಾನರ್ಜಿಯವರ ಹೆಸರನ್ನು ಪ್ರಕಟಿಸಿದ್ದಾರೆ.

ABOUT THE AUTHOR

...view details