ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನೆಲೆಸಿರುವ ಮಹಿಳೆ ಮಗನ ಜೊತೆ ಬದುಕುವ ಆಸೆಯಲ್ಲಿ ಎಲ್ಲ ತ್ಯಾಗಕ್ಕೂ ಸಿದ್ಧವಾಗಿದ್ದಾರೆ. ಭೋಪಾಲ್‌ನ ವ್ಯಾಪಾರವನ್ನೂ ವಿಚ್ಛೇಧನ ನೀಡಲಾದ ಗಂಡನಿಗೆ ನೀಡಿದ್ದಾರೆ. ಸದ್ಯ ಮಹಿಳೆ ವಿದೇಶದಲ್ಲಿ ನೆಲೆಸಿದ್ದು, ಈಗ ಕಾಲ ಕಾಲಕ್ಕೆ ಮಗನನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ. ಇದರೊಂದಿಗೆ ನಿತ್ಯ ತನ್ನ ಮಗನ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಬಹುದಾಗಿದೆ. ಒಪ್ಪಂದದ ನಿಯಮಗಳನ್ನು ಒಪ್ಪಿಕೊಂಡ ನಂತರ ಕುಟುಂಬ ನ್ಯಾಯಾಲಯವು ಈ ಆದೇಶ ನೀಡಿದೆ.
ಮಗನಿಗೆ ಭಾರತೀಯ ಸಂಸ್ಕಾರ ಕಲಿಸಲು ಮುಂದಾಗಿದ್ದ ದಂಪತಿ: ಲಂಡನ್ ನಿವಾಸಿ ಎನ್‌ಆರ್‌ಐ ಮಹಿಳೆ ಭೋಪಾಲ್‌ನ ಈದ್ಗಾ ಹಿಲ್ಸ್‌ನ ನಿವಾಸಿಯನ್ನು ವಿವಾಹವಾಗಿದ್ದರು. ಮಹಿಳೆ ಭೋಪಾಲ್ ನಲ್ಲಿ ವ್ಯಾಪಾರ ಆರಂಭಿಸಿದ್ದರು. ಇದು ಅವರ ಲಂಡನ್ ವ್ಯವಹಾರದ ಶಾಖೆಯಾಗಿತ್ತು. ಭೋಪಾಲ್‌ನಲ್ಲಿ ವ್ಯಾಪಾರವು ಚೆನ್ನಾಗೆ ನಡೆಯುತ್ತಿತ್ತು. ಸ್ವಲ್ಪ ಸಮಯದ ನಂತರ ಇಬ್ಬರೂ ಲಂಡನ್‌ನಲ್ಲಿ ನೆಲೆಸಿದ್ದಾರೆ. ಮದುವೆಯಾದ ಎರಡು ವರ್ಷಗಳ ನಂತರ ಒಬ್ಬ ಮಗ ಜನಿಸಿದ್ದಾನೆ. ನಾಲ್ಕು ವರ್ಷಗಳ ಹಿಂದೆ, ಮಗುವಿಗೆ ಭಾರತೀಯ ಸಂಸ್ಕೃತಿ ಸಿಗಲಿ ಎಂದು ದಂಪತಿಗಳು ಮಗನನ್ನು ಭೋಪಾಲ್‌ನಲ್ಲಿ ತನ್ನ ಅಜ್ಜಿಯರ ಬಳಿ ಬಿಟ್ಟು ಹೋಗಿದ್ದರು. ಒಂದೆರಡು ವರ್ಷದಲ್ಲಿ ಮಗುವನ್ನು ಕರೆದುಕೊಂಡು ಹೋಗುವುದು ದಂಪತಿಗಳ ಯೋಜನೆಯಾಗಿತ್ತು.
ಒಂದು ವರ್ಷದ ಹಿಂದೆ ವಿಚ್ಛೇದನ:ಈ ಮಧ್ಯೆ, ಕೊರೊನಾದಿಂದಾಗಿ ಇವರು ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಪತಿ ತನ್ನ ಹೆಂಡತಿಯನ್ನು ಭಾರತದಲ್ಲಿಯೇ ನೆಲೆಸುವಂತೆ ಕೇಳಿದ್ದಾರೆ. ಆದರೆ,ಅದಕ್ಕೆ ಹೆಂಡತಿ ಸಿದ್ಧವಾಗಿರಲಿಲ್ಲ. ಇಬ್ಬರ ನಡುವೆ ಉದ್ವಿಗ್ನತೆ ಹೆಚ್ಚಾಗಿ ಗಂಡ ಅಲ್ಲಿಂದ ಭೋಪಾಲ್ಗೆ ಬಂದು ನೆಲೆಸಿದ್ದ. ಇಲ್ಲಿ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವರ್ಷದಲ್ಲಿ ವಿಚ್ಛೇದನ ಸಹ ಸಿಕ್ಕಿದೆ.