ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳದಲ್ಲಿ ಸಭೆ ನಡೆಸಿ, ರೈತರ ಜೀವ ಕಸಿದುಕೊಳ್ಳುವವರಿಗೆ ಮತ ಹಾಕ್ಬೇಡಿ ಅಂತಾ ಹೇಳ್ತೇವೆ.. ರಾಕೇಶ್ ಟಿಕಾಯತ್​ - ರೋಹ್ಟಕ್ ಸುದ್ದಿ

ಹರಿಯಾಣದಲ್ಲಿ ನಡೆಯುತ್ತಿರುವ ಕಿಸಾನ್‌ ಮಹಾ ಪಂಚಾಯತ್‌ನಲ್ಲಿ ಮಾತನಾಡಿದ ಅವರು, "ನಾವು ದೇಶಾದ್ಯಂತ ಪಂಚಾಯತ್‌ಗಳನ್ನು ನಡೆಸುತ್ತೇವೆ. ಗುಜರಾತ್, ಮಹಾರಾಷ್ಟ್ರ, ಇತರ ಸ್ಥಳಗಳಿಗೆ ಹೋಗುತ್ತೇವೆ. ನಾವು ಪಶ್ಚಿಮ ಬಂಗಾಳಕ್ಕೆ ಹೋಗಿ ಅಲ್ಲಿಯೂ ದೊಡ್ಡ ಸಭೆ ನಡೆಸುತ್ತೇವೆ..

Rakesh tikayat
ರಾಕೇಶ್ ಟಿಕಾಯತ್​

By

Published : Feb 17, 2021, 2:44 PM IST

ರೋಹ್ಟಕ್(ಹರಿಯಾಣ) :ಪಶ್ಚಿಮ ಬಂಗಾಳದಲ್ಲೂ ಚುನಾವಣೆ ಸಮೀಪಿಸುತ್ತಿದೆ. ಅಲ್ಲಿಯೂ ರೈತ ಮುಖಂಡರು ಸಭೆ ನಡೆಸುತ್ತೇವೆ.

ರೈತರ ಜೀವನೋಪಾಯವನ್ನು ಕಸಿದುಕೊಳ್ಳುವವರಿಗೆ ಮತ ಚಲಾಯಿಸಬೇಡಿ ಎಂದು ಕೇಳಿಕೊಳ್ಳುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್​ ಹೇಳಿದರು.

"ನಾವು ಇಡೀ ರಾಷ್ಟ್ರದಲ್ಲಿ ಪ್ರವಾಸ ಮಾಡುತ್ತೇವೆ. ನಾವು ಪಶ್ಚಿಮ ಬಂಗಾಳಕ್ಕೂ ಹೋಗುತ್ತೇವೆ. ಪಶ್ಚಿಮ ಬಂಗಾಳದ ರೈತರು ಸಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ತಮ್ಮ ಬೆಳೆಗಳಿಗೆ ಉತ್ತಮ ದರ ಪಡೆಯುತ್ತಿಲ್ಲ" ಎಂದರು.

ಇದನ್ನು ಓದಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 11,610 ಕೊರೊನಾ ಸೋಂಕಿತರು ಪತ್ತೆ

ಹರಿಯಾಣದಲ್ಲಿ ನಡೆಯುತ್ತಿರುವ ಕಿಸಾನ್‌ ಮಹಾ ಪಂಚಾಯತ್‌ನಲ್ಲಿ ಮಾತನಾಡಿದ ಅವರು, "ನಾವು ದೇಶಾದ್ಯಂತ ಪಂಚಾಯತ್‌ಗಳನ್ನು ನಡೆಸುತ್ತೇವೆ. ಗುಜರಾತ್, ಮಹಾರಾಷ್ಟ್ರ, ಇತರ ಸ್ಥಳಗಳಿಗೆ ಹೋಗುತ್ತೇವೆ. ನಾವು ಪಶ್ಚಿಮ ಬಂಗಾಳಕ್ಕೆ ಹೋಗಿ ಅಲ್ಲಿಯೂ ದೊಡ್ಡ ಸಭೆ ನಡೆಸುತ್ತೇವೆ.

ಪಶ್ಚಿಮ ಬಂಗಾಳದ ರೈತರು ರಾಜ್ಯ ಸರ್ಕಾರ ಮತ್ತು ಕೇಂದ್ರದೊಂದಿಗೆ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾವು ಅಲ್ಲಿಯೂ ಪಂಚಾಯತ್ ನಡೆಸುತ್ತೇವೆ" ಎಂದರು.

ABOUT THE AUTHOR

...view details