ಚೆನ್ನೈ (ತಮಿಳುನಾಡು):ಯುಟ್ಯೂಬ್ನಲ್ಲಿ ಅವಹೇಳನಕಾರಿ ವಿಚಾರಗಳ ಪೋಸ್ಟ್ ಮಾಡಿದ್ದ ಸಂಬಂಧ ಖ್ಯಾತ ಯುಟ್ಯೂಬರ್ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬರ್ ಮಾಧವ್ ಮಾಣಿಕಂ ಅವರನ್ನ ತಮಿಳುನಾಡಿನ ಸೇಲಂನಲ್ಲಿ ಬಂಧಿಸಲಾಗಿದ್ದು, ಚೆನ್ನೈಗೆ ಕರೆತರಲಾಗಿದೆ. ಅಲ್ಲದೇ ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧವ್ ಮಾತ್ರವಲ್ಲದೇ ಆತನ ಪತ್ನಿ ಕೃತಿಕಾ ಎಂಬಾಕೆಯನ್ನೂ ಸಹ ಬಂಧಿಸಲಾಗಿದೆ. ಐಟಿ ನಿಯಮಗಳ ಉಲ್ಲಂಘಿಸಿ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ನಿಂದನಾತ್ಮಕ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದರು. ತಮ್ಮ ಚಾನಲ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಈ ರೀತಿಯ ಕೃತ್ಯಕ್ಕೆ ಕೈಹಾಕಿದ್ದರು. ಹೀಗಾಗಿ ದಂಪತಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.