ಕರ್ನಾಟಕ

karnataka

ETV Bharat / bharat

ಮದುವೆಯಾಗಿ ಕೆಲವೇ ದಿನ.. ಆತ್ಮಹತ್ಯೆಗೆ ಶರಣಾದ ಸಾಫ್ಟ್‌ವೇರ್‌ ಇಂಜಿನಿಯರ್ - ಇಂಜಿನಿಯರ್ ಮಹಿಳೆ

ಮದುವೆಯಾದ ಕೆಲವೇ ದಿನಗಳಲ್ಲೇ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Etv Bharat
Etv Bharat

By

Published : Sep 19, 2022, 12:10 PM IST

ಈರೋಡ್(ತಮಿಳನಾಡು):ಕಳೆದ ಕೆಲವು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಾವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಗಂಡನೊಂದಿಗೆ ಚೆನ್ನೈನಲ್ಲಿ ವಾಸವಾಗಿದ್ದ ಇವರು ಕಳೆದ ಎರಡು ದಿನಗಳ ಹಿಂದೆ ಗೋಬಿಚೆಟ್ಟಿಪಾಳ್ಯಂನಲ್ಲಿರುವ ತನ್ನ ಪೋಷಕರ ಮನೆಗೆ ಬಂದಿದ್ದರು. ವಿಶ್ರಾಂತಿ ಪಡೆದುಕೊಳ್ಳುವುದಾಗಿ ಹೇಳಿದ್ದು ತನಗೆ ತೊಂದರೆ ನೀಡದಂತೆ ಹೇಳಿ ರೂಂನೊಳಗೆ ಹೋಗಿ, ಬೀಗ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ.

ಕೆಲವು ಗಂಟೆಗಳು ಕಳೆದ್ರೂ ಬಾಗಿಲು ತೆರೆಯದ ಕಾರಣ, ಕುಟುಂಬ ಸದಸ್ಯರು ಬಾಗಿಲು ಒಡೆದು ಒಳಹೋಗಿದ್ದಾರೆ. ಈ ಸಂದರ್ಭದಲ್ಲಿ ಆಕೆ ಬೆಡ್​ ಮೇಲೆ ಬಿದ್ದಿರುವುದನ್ನು ನೋಡಿದ್ದಾರೆ. ಮುಖ ಭಾಗ ಪಾಲಿಥಿನ್​ ಚೀಲದಿಂದ ಸಂಪೂರ್ಣವಾಗಿ ಮುಚ್ಚಿರುವುದು ಕಂಡುಬಂದಿದೆ. ಹಾಸಿಗೆ ಪಕ್ಕದಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್​ ಸಿಕ್ಕಿದೆ.

ಇದನ್ನೂ ಓದಿ:ಕಾಲಿವುಡ್​ ಯುವ ನಟಿ ದೀಪಾ ಆತ್ಮಹತ್ಯೆ.. ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೋಸ್ಕರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೀಲಿಯಂ ಸೇವನೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮೃತ ಮಹಿಳೆಯ ಪೋಷಕರು ಹಾಗೂ ಪತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ABOUT THE AUTHOR

...view details