ಶಿವಗಂಗಾ (ತಮಿಳುನಾಡು):ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಆಹಾರ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಗ್ರಾಮ ಪಂಚಾಯಿತಿಯ ಉಪಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು.
ಕಾಂಜಿರಂಗಲ್ ಪಂಚಾಯಿತಿ ಶಿವಗಂಗಾ ಜಿಲ್ಲಾ ಪ್ರದೇಶದಿಂದ 1 ಕಿಮೀ ದೂರದಲ್ಲಿದೆ. ಸುಮಾರು 500 ಕುಟುಂಬಗಳು ಇಲ್ಲಿ ವಾಸಿಸುತ್ತವೆ. ಗ್ರಾಮವು ಆಹಾರ ತ್ಯಾಜ್ಯ ಮತ್ತು ಕಸದಿಂದ ವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ.
ಆಹಾರ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಷ್ಟ್ರೀಯ ರರ್ಬನ್ ಯೋಜನೆ (The Rural Development and Panchayat Raj National Rurban Project) ಅಡಿ ಸುಮಾರು ₹66 ಲಕ್ಷ ವೆಚ್ಚದಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲು ಬಯೋಗ್ಯಾಸ್ ಪ್ಲಾಂಟ್ ಸ್ಥಾಪಿಸಲಾಗಿದೆ.
ಈ ಯೋಜನೆಯಡಿ, ಶಿವಗಂಗಾ ಗ್ರಾಮೀಣಾಭಿವೃದ್ಧಿ ಇಲಾಖೆಯು ಕಾಂಜಿರಂಗಲ್ ಗ್ರಾಮ ಮತ್ತು ಶಿವಗಂಗೈ ನಗರ ಪ್ರದೇಶಗಳಲ್ಲಿ ಸಂಗ್ರಹಿಸಿದ ಕೋಳಿ, ಮೀನು ಮತ್ತು ತರಕಾರಿ ತ್ಯಾಜ್ಯವನ್ನು ಬಳಸಿ ವಿದ್ಯುತ್ ಉತ್ಪಾದಿಸಲು ಆರಂಭಿಸಿದೆ. ಮಾಲಿನ್ಯ ನಿಯಂತ್ರಣದಲ್ಲಿ ಈ ಉಪಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ.
ಇಂಜಿನಿಯರ್‌ಗಳು ಇಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ನೀರಿನಲ್ಲಿ ಬೆರೆಸಿ, ಟ್ಯಾಂಕ್‌ಗೆ ಸುರಿಯುತ್ತಾರೆ. ಬಳಿಕ ಗಿರಣಿ ಮಾಡಿ ಮತ್ತು ಜನರೇಟರ್ ಬಳಸಿ ವಿದ್ಯುತ್ ಉತ್ಪಾದಿಸಲು ಬಳಸುತ್ತಾರೆ ಎಂದು ಹೇಳುತ್ತಾರೆ. ವಿದ್ಯುತ್ ಉತ್ಪಾದನೆಯ ನಂತರ, ಶೇಷವನ್ನು ಕೃಷಿಗೆ ನೈಸರ್ಗಿಕ ಗೊಬ್ಬರವಾಗಿ ಬಳಸಲಾಗುತ್ತದೆ ಮತ್ತು ರೈತರು ಉತ್ಸಾಹದಿಂದ ಬಂದು ಅವುಗಳನ್ನು ಸಂಗ್ರಹಿಸುತ್ತಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಗಳ ಪ್ರಕಾರ, ಸ್ಥಾವರದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದರೆ ಇಡೀ ಶಿವಗಂಗಾ ಜಿಲ್ಲೆಯು ವಿದ್ಯುತ್ನಲ್ಲಿ ಸ್ವಲ್ಪಮಟ್ಟಿಗೆ ಸ್ವಾವಲಂಬಿಯಾಗುತ್ತದೆ. ಪ್ರಧಾನಿಯವರು ತಮ್ಮ ಭಾಷಣದಲ್ಲಿ ಈ ಯೋಜನೆ ಹೊಗಳಿದ್ದಾರೆ.
ಓದಿ:ಹುಟ್ಟುಹಬ್ಬದಂದೇ ಭೀಕರ ಅಪಘಾತ.. ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬ