ಕರ್ನಾಟಕ

karnataka

ETV Bharat / bharat

ಸಿಎಂ ಉದ್ಘಾಟಿಸಿದ ಕಟ್ಟಡದ ಒಂದೇ ಬಾತ್​ರೂಮ್​ನಲ್ಲಿ ಎರಡು ಕಮೋಡ್‌ಗಳು: ಫೋಟೋಗಳು ವೈರಲ್ - ಕಮೋಡ್‌ ಫೋಟೋಗಳು ವೈರಲ್

ತಮಿಳುನಾಡಿನ ಶ್ರೀಪೆರಂಬದೂರಿನ ಸರ್ಕಾರಿ ಕಟ್ಟಡದಲ್ಲಿ ಎರಡು ವೆಸ್ಟರ್ನ್ ಕಮೋಡ್‌ಗಳನ್ನು ಅಕ್ಕ ಪಕ್ಕದಲ್ಲೇ ಜೋಡಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

tn-two-toilets-in-a-single-bathroom-at-building-inaugurated-by-cm-stalin-images-go-viral
ಸಿಎಂ ಉದ್ಘಾಟಿಸಿದ ಕಟ್ಟಡದ ಒಂದೇ ಬಾತ್​ರೂಮ್​ನಲ್ಲಿ ಎರಡು ಕಮೋಡ್‌ಗಳು: ಫೋಟೋಗಳು ವೈರಲ್

By

Published : Oct 12, 2022, 8:40 PM IST

ಚೆನ್ನೈ (ತಮಿಳುನಾಡು):ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಉದ್ಘಾಟಿಸಿರುವ ಸರ್ಕಾರಿ ಕಟ್ಟಡದಲ್ಲಿ ಒಂದೇ ಸ್ನಾನಗೃಹದಲ್ಲಿ ಎರಡು ವೆಸ್ಟರ್ನ್ ಕಮೋಡ್‌ಳು ಇವರು ಫೋಟೋಗಳು ವೈರಲ್ ಆಗಿವೆ. ಇದೇ ವೇಳೆ ಕಾಮಗಾರಿಯ ಗುಣಮಟ್ಟದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ತಮಿಳುನಾಡಿನ ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮದ (ಸಿಪ್‌ಕಾಟ್) ನೂತನ ಕಟ್ಟಡವನ್ನು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಉದ್ಘಾಟಿಸಿದ್ದರು. ಅಂದಾಜು 1.80 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ.

ಆದಾಗ್ಯೂ, ಕಟ್ಟಡದಲ್ಲಿ ಎರಡು ವೆಸ್ಟರ್ನ್ ಕಮೋಡ್‌ಗಳನ್ನು ಅಕ್ಕ ಪಕ್ಕದಲ್ಲೇ ಜೋಡಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಇಡೀ ಕಟ್ಟಡದ ಕಾಮಗಾರಿಯು ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಕಟ್ಟಡದ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ. ಜೊತೆಗೆ ತಮಿಳುನಾಡು ಸರ್ಕಾರ ನಿಗದಿತ ಗಡುವಿಗಿಂತ ಮೊದಲೇ ಕಾಮಗಾರಿ ಮುಗಿಸಲು ಆತುರ ಪಡುತ್ತಿದೆಯೇ ಎಂದು ಜನರು ಕೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿಪ್‌ಕಾಟ್ ಯೋಜನಾಧಿಕಾರಿ ಕವಿತಾ ಮಾತನಾಡಿ, ಈ ಕಟ್ಟಡದಲ್ಲಿ ಇನ್ನೂ ಕಾಮಗಾರಿ ಸಂಪೂರ್ಣವಾಗಿಲ್ಲ. ಎರಡು ಕಮೋಡ್‌ಳು ಇರುವ ಬಾತ್​ರೂಮ್​ನಲ್ಲಿ ನಡುವೆ ತಡೆಗೋಡೆ ಕಟ್ಟಲಾಗುತ್ತದೆ ಎಂದು ಹೇಳಿದ್ದಾರೆ.

ಒಂದು ತಿಂಗಳ ಹಿಂದೆ ಕೊಯಮತ್ತೂರಿನ ಕಾರ್ಪೊರೇಷನ್​ನ ಅಮ್ಮನ್ ಕುಲಂ ಪ್ರದೇಶದಲ್ಲೂ ಒಂದೇ ಶೌಚಾಲಯದಲ್ಲಿ ಎರಡು ಟಾಯ್ಲೆಟ್ ಬೌಲ್‌ಗಳನ್ನು ಸ್ಥಾಪಿಸಲಾಗಿತ್ತು. ಆಗ ಕೂಡ ಇದೇ ರೀತಿಯ ಚರ್ಚೆ ಉಂಟಾಗಿತ್ತು. ಇಲ್ಲಿ ಈ ಹಿಂದೆ ಶೌಚಾಲಯಕ್ಕೆ ಬಾಗಿಲು ಇಲ್ಲದ ಕಾರಣಕ್ಕೆ ಸಾರ್ವಜನಿಕರು ಬಳಸುತ್ತಿರಲಿಲ್ಲ. ಆದರೆ, ಅಧಿಕಾರಿಗಳು ನವೀಕರಣ ಕಾಮಗಾರಿ ಆರಂಭಿಸಿದ ಬಳಿಕ ಅವ್ಯವಸ್ಥೆ ಸರಿಪಡಿಸುವ ನಿರೀಕ್ಷೆಯಲ್ಲಿ ಸ್ಥಳೀಯರು ಇದ್ದರು.

ಆದರೆ, ಕೊಯಮತ್ತೂರಿನ ಕಾರ್ಪೊರೇಷನ್ ಒಂದೇ ಶೌಚಾಲಯದಲ್ಲಿ ಎರಡು ಟಾಯ್ಲೆಟ್ ಬೌಲ್‌ಗಳನ್ನು ಒಟ್ಟಿಗೆ ಇರಿಸಿ ಎಡವಟ್ಟು ಮಾಡಿತ್ತು. ಹೀಗಾಗಿಯೇ ನಿರ್ಲಕ್ಷ್ಯತನ ಕಾಮಗಾರಿಗಳಿಂದ ತೆರಿಗೆ ಹಣ ಪೋಲಾಗುತ್ತಿದೆ ಎಂದೂ ಸಾರ್ವಜನಿಕರು ಕಿಡಿಕಾರುವಂತೆ ಆಗಿದೆ.

ಇದನ್ನೂ ಓದಿ:ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮ ಕಟ್ಟಡದ ಒಂದೇ ಬಾತ್​ರೂಮ್​ನಲ್ಲಿ ಎರಡು ಶೌಚಾಲಯ!

ABOUT THE AUTHOR

...view details