ಚೆನ್ನೈ (ತಮಿಳುನಾಡು):ತಮಿಳುನಾಡು ಆರೋಗ್ಯ ಇಲಾಖೆಯು ಸೋಮವಾರದಿಂದ ರಾಜ್ಯಾದ್ಯಂತ 24x7 ಲಸಿಕೆ ಶಿಬಿರಗಳನ್ನು ಆರಂಭಿಸಲು ಸಜ್ಜಾಗಿದೆ. ಕೋವಿಡ್ ವಿರುದ್ಧ ದಿನದ 24 ಗಂಟೆ ವ್ಯಾಕ್ಸಿನೇಷನ್ ಶಿಬಿರಗಳನ್ನು ಹೊಂದಿರುವ ದೇಶದ ಮೊದಲ ಯೋಜನೆ ಇದಾಗಿರಲಿದೆ.
ರಾಜ್ಯದ ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲಿ ಈ ಶಿಬಿರಗಳನ್ನು ಸ್ಥಾಪಿಸಲಾಗುವುದು ಮತ್ತು ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯದ ಆವರಣದಲ್ಲಿ ಪ್ರಯೋಗ ಶಿಬಿರವನ್ನು ಆರಂಭಿಸಲಾಗಿದೆ.
ಈ ಶಿಬಿರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಈಗಾಗಲೇ ಬ್ಯಾಚ್ ಗಳಲ್ಲಿ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಅಲ್ಲದೆ ಮೇಲ್ವಿಚಾರಣೆಗಾಗಿ ವಿಶೇಷ ತಂಡ ಸಹ ರಚನೆಯಾಗಿದೆ. ಸೋಮವಾರದಿಂದ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಲ್ಲಿ ಶಿಬಿರಗಳು ಆರಂಭವಾಗಲಿವೆ ಎಂದು ಇಲಾಖೆ ತಿಳಿಸಿದೆ.
ಶಿಬಿರಗಳ ಕಾರ್ಯವೈಖರಿಯ ಕುರಿತು ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಮತ್ತು ಲಸಿಕೆ ತೆಗೆದುಕೊಳ್ಳಲು ಹೆಚ್ಚಿನ ಜನರು ಸೌಲಭ್ಯವನ್ನು ತಲುಪಲು ಜಾಹೀರಾತು ಸೇರಿದಂತೆ ಆರೋಗ್ಯ ಇಲಾಖೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆಧಾರ್ ಕಾರ್ಡ್ ಜೊತೆ ಶಿಬಿರಕ್ಕೆ ಆಗಮಿಸಿ ಲಸಿಕೆ ಪಡೆಯಬಹುದು ಎಂದು ತಿಳಿಸಲಾಗಿದೆ.
ಓದಿ:ದೇಶಾದ್ಯಂತ ಕೋವಿಡ್ಗೆ ಒಂದೇ ದಿನ 403 ಮಂದಿ ಬಲಿ.. ಪಾಸಿಟಿವ್ ಕೇಸ್ ಇಳಿಕೆ