ಕರ್ನಾಟಕ

karnataka

By ETV Bharat Karnataka Team

Published : Oct 28, 2023, 10:32 AM IST

ETV Bharat / bharat

ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಚಾಕುವಿನಿಂದ ದಾಳಿ.. ಮೂವರು ಪೊಲೀಸರಿಗೆ ಗಾಯ, ಆರೋಪಿಗೆ ಬಿತ್ತು ಗುಂಡೇಟು!

ಕಳ್ಳತನದ ಸ್ಥಳ ತೋರಿಸಲು ಕರೆದುಕೊಂಡು ಹೋಗುತ್ತಿದ್ದ ಮೂವರು ಪೊಲೀಸರ ಮೇಲೆ ಆರೋಪಿಯೊಬ್ಬ ಏಕಾಏಕಿ ಚಾಕುವಿನಿಂದ ದಾಳಿ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.

TN Police Shoot and Caught  TN Police Shoot and Caught Andhra Pradesh Accused  Andhra Pradesh Accused for Continued Robbery  ಆರೋಪಿಗೆ ಬಿತ್ತು ಗುಂಡೇಟು  ಪೊಲೀಸರ ಮೇಲೆ ಚಾಕುವಿನಿಂದ ದಾಳಿ  ಘಟನೆ ತಮಿಳುನಾಡಿನ ಕೃಷ್ಣಗಿರಿ  ಆರೋಪಿಯೊಬ್ಬ ಏಕಾಏಕಿ ಚಾಕುವಿನಿಂದ ದಾಳಿ  ಜಿಲ್ಲೆಯಲ್ಲಿ ದುರಂತ ಘಟನೆ
ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಚಾಕುವಿನಿಂದ ದಾಳಿ

ಕೃಷ್ಣಗಿರಿ, ತಮಿಳುನಾಡು: ಜಿಲ್ಲೆಯಲ್ಲಿ ದುರಂತ ಘಟನೆಯೊಂದು ನಡೆದಿದೆ. ಕಳ್ಳತನದ ಸ್ಥಳ ಮಹಜರಿಗಾಗಿ ಮೂವರು ಪೊಲೀಸರು ಆರೋಪಿಯೊಬ್ಬನನ್ನು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆರೋಪಿ ಮೂವರು ಪೊಲೀಸರ ಮೇಲೆ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಘಟನೆ ಹೊಸೂರಿನಲ್ಲಿ ನಡೆದಿದೆ.

ನಾಮ್ದಾರ್ ಹುಸೇನ್ (ವಯಸ್ಸು 34) ಆಂಧ್ರಪ್ರದೇಶದವನು. ಈತನ ವಿರುದ್ಧ ವಿವಿಧ ಕಳ್ಳತನ ಪ್ರಕರಣಗಳಿವೆ. ಈ ಪ್ರಕರಣದಲ್ಲಿ ಕೃಷ್ಣಗಿರಿ ನಗರ ಠಾಣೆಯಲ್ಲಿ ನಾಲ್ಕು ಹಾಗೂ ಹೊಸೂರು ವ್ಯಾಪ್ತಿಯ ಹುಡ್ಕೋ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಎರಡು ದಿನಗಳ ಹಿಂದೆ ಆಂಧ್ರಪ್ರದೇಶ ರಾಜ್ಯದಲ್ಲಿ ಹೊಸೂರು ಹುಡ್ಕೋ ಪೊಲೀಸ್ ಇಲಾಖೆ ಆರೋಪಿಗಾಗಿ ಹುಡುಕಾಟದಲ್ಲಿ ತೊಡಗಿತ್ತು. ಸುದೀರ್ಘ ಹುಡುಕಾಟದ ನಂತರ ನಾಮದಾರ್ ಹುಸೇನ್​ನನ್ನು ಬಂಧಿಸಿ ಹೊಸೂರಿಗೆ ಕರೆತರಲಾಯಿತು.

ಇದರ ಬೆನ್ನಲ್ಲೇ ಬಂಧಿತ ನಾಮದಾರ್ ಹುಸೇನ್​ನನ್ನು ತಿರುಪತಿ ಮೆಜೆಸ್ಟಿಕ್ ಎಂಬಲ್ಲಿಗೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಆರೋಪಿ ನಿಲ್ಲಿಸಿದ್ದ ದ್ವಿಚಕ್ರ ವಾಹನದಿಂದ ಚಾಕು ತೆಗೆದುಕೊಂಡು ಎಸ್‌ಐ ಸೇರಿದಂತೆ ಮೂವರು ಪೊಲೀಸರ ಕೈ ಮತ್ತು ಹೊಟ್ಟೆಗೆ ಇರಿದು ಪರಾರಿಯಾಗಿದ್ದನು.

ಎಡಗೈಗೆ ಪೆಟ್ಟು ಮಾಡಿಕೊಂಡಿದ್ದ ಎಸ್‌ಐ ವಿನೋತ್ ತಮ್ಮ ಬಂದೂಕಿನಿಂದ ಬಲ ಮೊಣಕಾಲಿನ ಕೆಳಗೆ ಗುಂಡು ಹಾರಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಆರೋಪಿ ಚಾಕುವಿನಿಂದ ಇರಿದ ಪರಿಣಾಮ ಎಸ್‌ಐ ವಿನೋತ್, ಹೆಡ್ ಕಾನ್ಸ್​ಟೇಬಲ್ ರಾಮಸ್ವಾಮಿ ಮತ್ತು ಪ್ರಥಮ ಹಂತದ ಕಾನ್‌ಸ್ಟೆಬಲ್ ವಿಜಿಯರಸು ಅವರ ಕೈಗಳಿಗೆ ಗಾಯಗಳಾಗಿವೆ. ಮೂವರನ್ನು ಹೊಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ರೀತಿ ನಾಮದಾರ್ ಹುಸೇನ್ ಹೊಸೂರು ಜಿಎನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದಿ:ಅಪಘಾತದಲ್ಲಿ ಮೃತಪಟ್ಟ ಬಡಪಾಯಿ ವ್ಯಕ್ತಿಯ ಕುಟುಂಬಕ್ಕೆ ₹10 ಲಕ್ಷದ ಮನೆ ಕಟ್ಟಿಸಿ, ಗೃಹಪ್ರವೇಶವನ್ನೂ ಮಾಡಿಸಿಕೊಟ್ಟ ಪೊಲೀಸರು!

ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರಿಂದ ಗುಂಡೇಟು:ಕೋಲಾರಜಿಲ್ಲೆಯಲ್ಲಿ ಮತ್ತೆ ಪೊಲೀಸರಿಂದ ಗುಂಡಿನ ಸದ್ದು ಕೇಳಿಬಂದಿದೆ. ದರೋಡೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಅಕ್ಟೋಬರ್​ 27ರಂದು ನಡೆದಿದೆ. ಕೋಲಾರ ತಾಲೂಕಿನ ಸಂಗೊಂಡಹಳ್ಳಿ ನೀಲಗಿರಿ ತೋಪಿನಲ್ಲಿ ಹಾಸನ ಮೂಲದ ಸುಹೇಬ್ ಹಾಗೂ ಅಸ್ಸೋಂ ಮೂಲದ ಶ್ಯಾಮ್ ಸುಲ್ ಎಂಬ ಆರೋಪಿಗಳ ಕಾಲಿಗೆ ಗುಂಡೇಟು ನೀಡಿದ್ದಾರೆ.

ಕಳ್ಳತನದ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆರೋಪಿಗಳನ್ನು ಹಿಡಿಯುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ್ದರು. ಮಾಸ್ತಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹೇಮಂತ್, ಸಿಬ್ಬಂದಿ ನಿಖಿಲ್ ಹಾಗೂ ವಿಶ್ವನಾಥ್​ಗೆ ಗಾಯಗಳಾಗಿದ್ದು, ಕೋಲಾರ‌ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details