ಚೆನ್ನೈ (ತಮಿಳುನಾಡು):ಜೂನ್ 17 ರಂದು ನಡೆಯಲಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಸಭೆಯಲ್ಲಿ ಕರ್ನಾಟಕದ ವಿವರವಾದ ಯೋಜನಾ ವರದಿ (DPR) ಕುರಿತು ಯಾವುದೇ ಚರ್ಚೆ ನಡೆಸದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ನಿರ್ದೇಶನ ನೀಡುವಂತೆ ತಮಿಳುನಾಡು ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ದುರೈಮುರುಗನ್ ಹೇಳಿದ್ದಾರೆ.
ಮೇಕೆದಾಟು ಯೋಜನೆಯ ವಿಷಯವನ್ನು ಚರ್ಚಿಸಲು CWMA ಗೆ ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದ ದುರೈಮುರುಗನ್, ಜೂನ್ 17 ರಂದು ನವದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ವಿವಾದಾತ್ಮಕ ಯೋಜನೆಯ ಬಗ್ಗೆ ನಡೆಯುವ ಚರ್ಚೆಯನ್ನು ರಾಜ್ಯವು ಕಟುವಾಗಿ ವಿರೋಧಿಸುತ್ತದೆ ಎಂದು ಹೇಳಿದರು.