ಚೆನ್ನೈ: ತಮಿಳುನಾಡು ಮೀನುಗಾರಿಕೆ ಸಚಿವ ಅನಿತಾ ಆರ್ ರಾಧಾಕೃಷ್ಣನ್ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ತಿರುವಳ್ಳೂರು ಜಿಲ್ಲೆಯ ಪಾಲವರ್ಕಡು ಸಮುದ್ರ ತೀರಕ್ಕೆ ಸಚಿವರು ಭೇಟಿ ನೀಡಿದ ಸಮಯದಲ್ಲಿ ತಮ್ಮ ಶೂ ಒದ್ದೆಯಾಗುತ್ತದೆ ಎಂದು ಮೀನುಗಾರರ ಭುಜದ ಮೇಲೆ ಕುಳಿತು ತೀರ ದಾಟಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಸಚಿವರ ಈ ನಡೆಗೆ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಇದೇನಾ ಸಚಿವ ಸಂಸ್ಕೃತಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಮುದ್ರ ಕೊರೆತದ ಬಗ್ಗೆ ಪರಿಶೀಲನೆಗೆ ಬಂದಿದ್ದ ವೇಳೆ ಸಚಿವರು ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದರು.