ಕರ್ನಾಟಕ

karnataka

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಹಿನ್ನಡೆ: ಮುನ್ನಡೆ ಸಾಧಿಸಿದ ಅಭ್ಯರ್ಥಿಗಳಿವರು!

ಸ್ಟಾಲಿನ್​ ನಾಯಕತ್ವದ ಡಿಎಂಕೆ ಪಕ್ಷ 136 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಆಡಳಿತಾರೂಢ ಎಐಎಡಿಎಂಕೆ 93 ಸ್ಥಾನಗಳಲ್ಲಿ ಮುಂದಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 118 ಸ್ಥಾನಗಳ ಅಗತ್ಯವಿದೆ. ಸ್ಟಾಲಿನ್​ ಪಕ್ಷ ಈಗಾಗಲೇ 135 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

By

Published : May 2, 2021, 12:05 PM IST

Published : May 2, 2021, 12:05 PM IST

TN Leading VIP
TN Leading VIP

ಚೆನ್ನೈ:ತಮಿಳುನಾಡು ವಿಧಾನಸಭೆಯ ಚುನಾವಣೆ ಫಲಿತಾಂಶದಲ್ಲಿ ರಾಜ್ಯ ರಾಜಕಾರಣದ ಪ್ರಭಾವಿ ನಾಯಕರು ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಸ್ಟಾಲಿನ್​ ನಾಯಕತ್ವದ ಡಿಎಂಕೆ ಪಕ್ಷ 136 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಆಡಳಿತಾರೂಢ ಎಐಎಡಿಎಂಕೆ 93 ಸ್ಥಾನಗಳಲ್ಲಿ ಮುಂದಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 118 ಸ್ಥಾನಗಳ ಅಗತ್ಯವಿದೆ. ಸ್ಟಾಲಿನ್​ ಪಕ್ಷ ಈಗಾಗಲೇ 135 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಡೆಪ್ಯುಟಿ ಸಿಎಂ ಒ.ಪನ್ನಿರ್ ​ಸೆಲ್ವಂ ಬೋಡಿನಾಯಕನೂರಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕೊಯಮತ್ತೂರು (ದಕ್ಷಿಣ) ಕ್ಷೇತ್ರದಿಂದ ಮಕ್ಕಳ್​ ನೀಧಿ ಮುಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಕೂಡ ಮುಂದಿದ್ದಾರೆ.

ಎಡಪ್ಪಾಡಿ ಕೆ. ಪಳನಿಸ್ವಾಮಿ, ಎಂ.ಕೆ.ಸ್ಟಾಲಿನ್ ಹಾಗೂ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರ ಉಪಚುನಾವಣೆ ಅಭ್ಯರ್ಥಿ ವಿಜಯ್ ವಸಂತ್ ಕೂಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ನಟಿ ಖುಷ್ಬೂ ಸುಂದರ್, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ (ಅರವಿಕುರಿಚಿ ಕ್ಷೇತ್ರ), ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್, ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಹಾಗೂ ಎಎಂಎಂಕೆ ಟಿಟಿವಿ ದಿನಕರನ್ ಅವರಿಗೆ ಹಿನ್ನಡೆಯಾಗಿದೆ.

ABOUT THE AUTHOR

...view details