ಚೆನ್ನೈ: ಸರ್ಕಾರ ದಿನದ 24 ಗಂಟೆ ಮೂರು ಹಂತದಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ನೀಡಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಶುಕ್ರವಾರ ಹೇಳಿದ್ದಾರೆ.
24 ಗಂಟೆ ಮೂರು ಹಂತದಲ್ಲಿ ವಿದ್ಯುತ್ ಸರಬರಾಜು: ಚುನಾವಣಾ ಪ್ರಚಾರದಲ್ಲಿ ಪಳನಿಸ್ವಾಮಿ ಭರವಸೆ - Tamilnadu latest news
24 ಗಂಟೆ ಮೂರು ಹಂತದಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ನೀಡಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಪಳನಿಸಾಮಿ
ತಿರುಪುರದ ಉದುಮಲೈನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪಳನಿಸ್ವಾಮಿ ಮಾತನಾಡಿದ್ದು, ರೈತರ ಇಚ್ಛೆಯಂತೆ ಸರ್ಕಾರ ಪಂಪ್‌ಸೆಟ್‌ಗಳಿಗೆ 24 ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಮಾಡಲಿದೆ ಎಂದು ರಾಜ್ಯದ ಜನರಿಗೆ ಭರವಸೆ ನೀಡಿದ್ದಾರೆ.
ಈಗಾಗಲೇ ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ತಮ್ಮ ಸರ್ಕಾರವನ್ನು ಪ್ರಶಂಶಿಸಿದರು. ಈ ಬಳಿಕ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತಿರುಪುರದಲ್ಲಿ ಕನಿಮೋಜಿ ಸುಳ್ಳು ಪ್ರಚಾರ ನಡೆಸಿದ್ದಾರೆ ಎಂದರು.