ಚೆನ್ನೈ(ತಮಿಳುನಾಡು):ತಮಿಳುನಾಡು ಸರ್ಕಾರ ಮಂಗಳವಾರ ರಾಜ್ಯದ ಎಲ್ಲಾ 2.19 ಕೋಟಿ ಪಡಿತರ ಚೀಟಿದಾರರಿಗೆ ಪೊಂಗಲ್ ಉಡುಗೊರೆಯ ಟೋಕನ್ ವಿತರಿಸಲು ಪ್ರಾರಂಭಿಸಿದೆ. ಜ.8 ರವರೆಗೆ ಟೋಕನ್‌ಗಳನ್ನು ವಿತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಸಾರ್ವಜನಿಕರಿಗೆ ನೀಡಬೇಕಾದ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಆರ್ ಸಕ್ಕರಪಾಣಿ ಅವರು, ಜ.9 ರಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಯೋಜನೆಯನ್ನು ಉದ್ಘಾಟಿಸಲಿದ್ದು, ಪೊಂಗಲ್ ಉಡುಗೊರೆಯನ್ನು ಪಡಿತರ ಚೀಟಿದಾರರಿಗೆ ಜ.12 ರವರೆಗೆ ನೀಡಲಾಗುವುದು ಎಂದರು.
ಜಿಲ್ಲಾ ಕಾರ್ಯದರ್ಶಿಗಳು ಸಾರ್ವಜನಿಕ ವಿತರಣಾ ಅಂಗಡಿಗಳ (PDS) ಅಡಿಯಲ್ಲಿ ಪಡಿತರ ಚೀಟಿಗಳ ಸಂಖ್ಯೆಯನ್ನು ಆಧಾರಿಸಿ, ಪ್ರತಿದಿನ ಇಂತಿಷ್ಟು ಫಲಾನುಭವಿಗಳಿಗೆ ವಿತರಣೆ ಕಾರ್ಯ ನಡೆಸಲಿದ್ದಾರೆ. ಉಡುಗೊರೆಯಾಗಿ ಎಲ್ಲಾ ಪಡಿತರ ಚೀಟಿದಾರರಿಗೆ ಒಂದು ಕೆಜಿ ಅಕ್ಕಿ, ಒಂದು ಕೆಜಿ ಸಕ್ಕರೆ ಮತ್ತು ತಲಾ 1,000 ರೂ.ಗಳನ್ನು ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಶ್ರೀಲಂಕಾದ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರು ಸುಮಾರು 19,000 ಜನರು ಈ ಹಬ್ಬದ ಪ್ರಯೋಜನವನ್ನು ಪಡೆಯಲಿದ್ದಾರೆ. ಕಬ್ಬು ಬೆಳೆದ ರೈತರ ಮನವಿ ಸ್ಪಂದಿಸಿರುವ ಸರ್ಕಾರ ಒಂದು ಕಬ್ಬನ್ನು ಊಡುಗೊರೆಯಲ್ಲಿ ಸೇರಿದೆ.