ಚೆನ್ನೈ (ತಮಿಳುನಾಡು): 12 ರಿಂದ 18 ವಯಸ್ಸಿನ ಮಕ್ಕಳಿಗೆ ನೀಡಲು ಕಾರ್ಬೆವಾಕ್ಸ್ ಕೋವಿಡ್ ಲಸಿಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಈಗಾಗಲೇ ಅನುಮೋದನೆ ನೀಡಿದೆ. ತಮಿಳುನಾಡಿನ 12-15 ವಯಸ್ಸಿನ ಮಕ್ಕಳಿಗೆ ನೀಡಲು 3.89 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ರಾಜ್ಯ ಸ್ವೀಕರಿಸಿದೆ.
ಕೇಂದ್ರ ಸರ್ಕಾರವು ರಾಜ್ಯದಲ್ಲಿ 12-18 ವರ್ಷದ ಮಕ್ಕಳಿಗೆ 21.66 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ನಿಗದಿಪಡಿಸಿದ್ದು, 3.89 ಲಕ್ಷ ಡೋಸ್ ಸಿಕ್ಕಿದೆ. ಕೇಂದ್ರವು ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.