ಚೆನ್ನೈ (ತಮಿಳುನಾಡು): ಮಿಚುವಾಂಗ್ ಚಂಡಮಾರುತದ ಎಫೆಕ್ಟ್ನಿಂದ ಆಗಿರುವ ಹಾನಿಗೆ ತಕ್ಷಣವೇ 5,060 ಕೋಟಿ ರೂ.ಗಳ ಮಧ್ಯಂತರ ಪರಿಹಾರ ನಿಧಿ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಹಾನಿಯ ಪರಿಶೀಲನೆಗೆ ಕೇಂದ್ರದ ತಂಡವನ್ನು ಕಳುಹಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಚಂಡಮಾರುತದ ಕಾರಣದಿಂದ ಡಿಎಂಕೆ ಸಂಸದ ಟಿ.ಆರ್. ಬಾಲು, ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಪತ್ರ ನೀಡಲಿದ್ದಾರೆ.
ವಿವಿಧೆಡೆ ಜನಜೀವನ ಪುನಃಸ್ಥಾಪಿಸುವ ಕಾರ್ಯ ಚುರುಕು:ಡಿಸೆಂಬರ್ 3 ರಿಂದ 4ರ ಮಧ್ಯರಾತ್ರಿಯವರೆಗೆ, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಮತ್ತು ತಿರುವಳ್ಳೂರ್ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲದೇ, ಮಳೆ ನೀರು ಜನ ವಸತಿ ಪ್ರದೇಶಗಳಿಗೆ ಅವಾಂತರ ಸೃಷ್ಟಿ ಮಾಡಿದೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ ನೌಕರರು, ಟಿಎನ್ಎಸ್ಡಿಎಂಎ, ಎನ್ಡಿಆರ್ಎಫ್, ಖಾಸಗಿ ಸ್ವಯಂಸೇವಕರು ಜನರ ನೆರವಿಗೆ ಧಾವಿಸಿದ್ದು, ವಿವಿಧ ಪ್ರದೇಶಗಳಲ್ಲಿ ಪುನಃಸ್ಥಾಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮಳೆ ಅಬ್ಬರಕ್ಕೆ ಆರು ಜನರು ಸಾವು:ಇಂದು (ಬುಧವಾರ) ಚೆನ್ನೈನ ಹಲವು ಸ್ಥಳಗಳನ್ನು ಪುನಃಸ್ಥಾಪಿಸುವ ಕೆಲಸ ಭರದಿಂದ ಸಾಗಿದೆ. ಅರುಂಬಕ್ಕಂ ಪ್ರದೇಶವು ಇನ್ನೂ ಸಂಪೂರ್ಣವಾಗಿ ಜಲಾವೃತವಾಗಿದೆ. ಮಿಚುವಾಂಗ್ ಚಂಡಮಾರುತದ ಎಫೆಕ್ಟ್ನಿಂದ ಇಂದು ಬೆಳಗ್ಗೆ ಆರು ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕೆ-7 ಐಸಿಎಫ್ ಪಿಎಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ 2002ರ 48- ಬ್ಯಾಚ್‌ನ ಮೈಲಾಪುರದ ಹಳೆ ವಾಷರ್‌ಮೆನ್‌ಪೇಟೆಯ ಪೆರುಮಾಳ್ (ವಯಸ್ಸು 64) ಎಂಬವರ ಮೃತದೇಹ, ಜಿ5 ಸೆಕ್ರೆಟರಿಯೇಟ್ ಕಾಲೋನಿ ಪಿಎಸ್ ಮಿತಿಯಲ್ಲಿರುವ ಆಸ್ಪ್ರಿನ್ ಗಾರ್ಡನ್ ಬಳಿ ಮಳೆ ನೀರಿನಲ್ಲಿ ಪತ್ತೆಯಾಗಿದ್ದಾರೆ.