ಮಧುರೈ(ತಮಿಳುನಾಡು): ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇಡೀ ದೇಶವೇ ಇದರ ವಿರುದ್ಧ ಹೋರಾಟ ನಡೆಸುತ್ತಿದೆ. ಇದರ ಮಧ್ಯೆ ಪಿಎಂ ಹಾಗೂ ಸಿಎಂ ಪರಿಹಾರ ನಿಧಿಗಳಿಗೆ ಅನೇಕರು ತಮ್ಮ ಕೈಲಾದ ದೇಣಿಗೆ ನೀಡ್ತಿದ್ದಾರೆ.
ತಮಿಳುನಾಡಿನ ಸಿಎಂ ಪರಿಹಾರ ನಿಧಿಗೆ ಪುಟ್ಟ ಬಾಲಕನೊಬ್ಬ ಸಾವಿರ ರೂ. ದೇಣಿಗೆ ರೂಪದಲ್ಲಿ ನೀಡಿದ್ದನು. ಜತೆಗೆ ಪತ್ರ ಬರೆದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಈ ಹಣ ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದನು. ಆತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸ್ಟಾಲಿನ್ ಇದೀಗ ಸೈಕಲ್ ಗಿಫ್ಟ್ ನೀಡಿದ್ದಾರೆ. ಜತೆಗೆ ಆತನ ಕಾರ್ಯಕ್ಕೆ ಶಹಬ್ಬಾಸ್ಗಿರಿ ನೀಡಿದ್ದಾರೆ. ಜತೆಗೆ ಆತನೊಂದಿಗೆ ಫೋನ್ನಲ್ಲಿ ಮಾತನಾಡಿದ್ದಾರೆಂದು ತಿಳಿದು ಬಂದಿದೆ.
ಸೈಕಲ್ ಖರೀದಿ ಮಾಡುವ ಉದ್ದೇಶದಿಂದ ಬಾಲಕ ಪಾಕೆಟ್ ಮನಿ ಸಂಗ್ರಹ ಮಾಡಿದ್ದನು. ಆದರೆ ಕೊರೊನಾ ಹಾವಳಿ ಹೆಚ್ಚಾದ ಕಾರಣ ಅದನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದನು. ಇದೀಗ ನೂತನ ಮುಖ್ಯಮಂತ್ರಿ ಸ್ಟಾಲಿನ್ ಟ್ವಿಟರ್ ಅಕೌಂಟ್ನಲ್ಲೂ ಇದರ ಬಗ್ಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮದುವೆ ವೇಳೆ ವಧು ಕೇಳಿದ ಲೆಕ್ಕಕ್ಕೆ ಉತ್ತರ ನೀಡದ ವರ.. ಮದುವೆ ಕ್ಯಾನ್ಸಲ್ ಮಾಡಿಕೊಂಡ ಯುವತಿ!
ತಮಿಳುನಾಡಿನಲ್ಲೂ ಕಳೆದ ಕೆಲ ದಿನಗಳಿಂದ ಸಾವಿರಾರು ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ 28,928 ಸಕ್ರಿಯ ಪ್ರಕರಣ ಕಾಣಿಸಿಕೊಂಡಿದ್ದು, 232 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 14,09,237 ಪ್ರಕರಣಗಳ ಪೈಕಿ ಇದೀಗ 1,52,389 ಸಕ್ರಿಯ ಕೇಸ್ಗಳಿದ್ದು, ಇಂದು 20,904 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇಂದಿನಿಂದ ತಮಿಳುನಾಡಿನಲ್ಲಿ ಲಾಕ್ಡೌನ್ ಘೋಷಣೆ ಮಾಡಿ ಆದೇಶ ಸಹ ಹೊರಡಿಸಲಾಗಿದೆ.