ನವದೆಹಲಿ:ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರ ಪತ್ನಿ ಮಧುಲತಾ ಮತ್ತು ಇತರ ಭದ್ರತಾ ಪಡೆ ಸಿಬ್ಬಂದಿಯ ಪಾರ್ಥಿವ ಶರೀರವನ್ನು ತಮಿಳುನಾಡಿನ ಸುಲೂರು ಏರ್ಬೇಸ್ನಿಂದ ದೆಹಲಿಯ ಪಾಲಂ ಏರ್ಬೇಸ್ಗೆ ತೆಗೆದುಕೊಂಡು ಬರಲಾಗಿದೆ.
ನಿನ್ನೆ ತಮಿಳುನಾಡಿಗೆ ಸೇನಾ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಬೆಳೆಸಿದ್ದ ಸಂದರ್ಭದಲ್ಲಿ ನೀಲಗಿರಿಯ ಕುನೂರು ಬಳಿ ಅಪಘಾತಕ್ಕೀಡಾಗಿದ್ದು, ಸೇನಾ ಮುಖ್ಯಸ್ಥ ರಾವತ್ ಸೇರಿದಂತೆ 13 ಯೋಧರು ಸಾವನ್ನಪ್ಪಿದ್ದಾರೆ. ಇದೀಗ ಅವರ ಪಾರ್ಥಿವ ಶರೀರಗಳನ್ನ ದೆಹಲಿಗೆ ತೆಗೆದುಕೊಂಡು ಬರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.